ಅಭಿಪ್ರಾಯ / ಸಲಹೆಗಳು

ಅಕಾಡೆಮಿ ಬಗ್ಗೆ

ಭಾಷೆ ಉಳಿಸಲು, ಸಂಸ್ಕೃತಿ ಬೆಳೆಸಲು ಅಕಾಡೆಮಿಯ ಅಗತ್ಯವಿದೆ. ಅದರಲ್ಲೂ ಒಂದು ಭಾಷೆಗೆ ಅಕಾಡೆಮಿ ಸಿಕ್ಕಿತು ಎಂದಾದರೆ ಆ ಭಾಷೆಗೆ ಸರಕಾರದಿಂದ ಮಾನ್ಯತೆ ಸಿಕ್ಕಿತು ಎಂದರ್ಥ. ಇಂದು ಕರ್ನಾಟಕ ಸರಕಾರದಿಂದ ಬ್ಯಾರಿ ಭಾಷೆಗೆ ಮಾನ್ಯತೆ ಸಿಕ್ಕಿದೆ. ಬ್ಯಾರಿ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಬ್ಯಾರಿಗಳನ್ನು ಸಾಹಿತ್ಯದತ್ತ ಸೆಳೆಯಲು ಇದು ಖಂಡಿತ ಸಹಕಾರಿಯಾಗಲಿದೆ. ಸಾಹಿತ್ಯಕ್ಕೂ ಶಿಕ್ಷಣಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಆದುದರಿಂದ ಅಕಾಡೆಮಿಯಿಂದ ಶೈಕ್ಷಣಿಕ ಜಾಗೃತಿಯೂ ಸಾಧ್ಯವಿದೆ. ಕರ್ನಾಟಕದಲ್ಲಿ ನಮ್ಮ ಸಹೋದರ ಭಾಷೆಯಾದ ತುಳು, ಕೊಂಕಣಿ, ಕೊಡವ ಭಾಷೆಗಳಿಗೆ ಸರಕಾರ ಈಗಾಗಲೇ ಅಕಾಡೆಮಿ ನೀಡಿ ಮಾನ್ಯತೆ ನೀಡಿದೆ. ಉರ್ದು ಭಾಷೆಗೂ ಅಕಾಡೆಮಿ ಇದೆ. ಈಗ ಬ್ಯಾರಿ ಭಾಷೆಗೂ ಈ ಗೌರವ ದೊರೆತಿದೆ. ಇದು ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ವಿಷಯ.

ಒಂದು ಕಾಲದಲ್ಲಿ ಬ್ಯಾರಿ ಭಾಷೆಯಲ್ಲಿ ಜನಪದ ಸಾಹಿತ್ಯಗಳ ಭಂಡಾರವೇ ಇತ್ತು. ದಫ್ ಒಂದನ್ನು ಹೊರತು ಪಡಿಸಿ, ಮದುವೆ ಸಮಾರಂಭಗಳಲ್ಲಿ ಹಬ್ಬದ ದಿನಗಳಲ್ಲಿ, ಧಾರ್ಮಿಕ ದಿನಾಚರಣೆಗಳ ಸಂದರ್ಭಗಳಲ್ಲಿ ಹೆಂಗಸರು, ಮಕ್ಕಳು, ಪುರುಷರು ಹಾಡಿ, ಕುಣಿದು ಸಂತೋಷ ಪಡುತ್ತಿದ್ದ ಜನಪದ ಹಾಡು, ಕುಣಿತಗಳೆಲ್ಲ ಈಗ ಅಳಿವಿನ ಅಂಚಿನಲ್ಲಿದೆ. ಬಾಯ್ತೆರೆಯಲ್ಲಿರುವ ಇಂತಹ ಜನಪದ ಸಾಹಿತ್ಯಗಳನ್ನು ಉಳಿಸಿ ಬೆಳೆಸುವುದು ಅಕಾಡೆಮಿಯ ಮೂಲ ಉದ್ದೇಶ. ಜೊತೆಗೆ ಬ್ಯಾರಿ ಸಾಹಿತ್ಯ ಸೃಷ್ಟಿಗೆ ಪ್ರಾಧಾನ್ಯತೆ ಇದೆ. ಇಂದು ಬ್ಯಾರಿಗಳಲ್ಲಿ ಬಹಳಷ್ಟು ಯುವ ಪ್ರತಿಭಾವಂತ ಲೇಖಕರು, ಲೇಖಕಿಯರು ಹೊರಬರುತ್ತಿದ್ದಾರೆ. ಅವರಿಗೆ ಕಮ್ಮಟ, ಸ್ಪರ್ಧೆಗಳನ್ನು ನಡೆಸುವ ಮೂಲಕ ಅವರ ಪ್ರತಿಭೆಯನ್ನು ಪೋಷಿಸುವ ಕೆಲಸ ಅಕಾಡೆಮಿಯ ಮೂಲಕ ಮಾಡಲು ಅವಕಾಶವಿದೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ಕೆಲಸವೇ ಅಕಾಡೆಮಿಯ ಕಾರ್ಯಕ್ಷೇತ್ರ.

''ಯಾವುದೇ ಒಂದು ಸಮುದಾಯವನ್ನು ನಾಶ ಮಾಡಬೇಕಾದರೆ `ಬಾಂಬ್'ನ ಅಗತ್ಯವಿಲ್ಲ. ಆ ಸಮುದಾಯದ ಭಾಷೆ, ಸಂಸ್ಕೃತಿಯನ್ನು ನಾಶ ಪಡಿಸಿಸಿದರೆ ಸಾಕು'' ಎಂಬುದು ತಿಳಿದವರು ಹೇಳುವ ಮಾತು. ಅಕಾಡೆಮಿಯು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಬ್ಯಾರಿ ಸಮುದಾಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತದೆ. ಬ್ಯಾರಿ ಭಾಷೆ, ಸಂಸ್ಕೃತಿ ಉಳಿದು, ಬೆಳೆದರೆ ಮಾತ್ರ ಬ್ಯಾರಿ ಸಮುದಾಯ ಉಳಿದು ಬೆಳೆಯುತ್ತದೆ.

ಸಾಹಿತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಪ್ರೀತಿ, ಮಾನವೀಯತೆ, ಸಹೋದರತೆ, ಸಾಹಿತ್ಯದ ಮೂಲಕ ಪ್ರಸಾರಗೊಳ್ಳಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರಾವಳಿ ಕರ್ನಾಟಕಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಬೇಕಾಗಿರುವುದೂ ಇದುವೇ. ಮನಸ್ಸು - ಮನಸ್ಸುಗಳನ್ನು ಬೆಸೆಯುವ ಕಾರ್ಯ ಸಾಹಿತ್ಯದ ಮೂಲಕ ಕಾರ್ಯರೂಪಕ್ಕೆ ತಂದರೆ ಆರೋಗ್ಯ ಪೂರ್ಣ ಸಮಾಜವನ್ನು ನಾವು ಕಾಣ ಬಹುದಾಗಿದೆ. ಇದಕ್ಕೆ ಪ್ರತಿಯೊಬ್ಬ ಬ್ಯಾರಿಯೂ ಅಕಾಡೆಮಿಯ ಜೊತೆ ಕೈ ಜೋಡಿಸಬೇಕಾಗಿದೆ.

ಇತ್ತೀಚಿನ ನವೀಕರಣ​ : 15-10-2020 04:20 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080