ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮಗಳ ವಿವರ

 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

2019 ಆಕ್ಟೋಬರನಿಂದ ನಡೆಸಲಾದ ಕಾರ್ಯಕ್ರಮಗಳ ವಿವರ:

 1. ಮೈಸೂರು ಬಹುರೂಪಿ ನಾಟಕೋತ್ಸವ : ದಿನಾಂಕ: 15-02-2020 ರಂದು ಅಕಾಡೆಮಿ ಮತ್ತು ರಂಗಾಯಣ ಮೈಸೂರು ಇದರ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆದ ಬಹುರೂಪಿ ನಾಟಕೋತ್ಸವ  ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಕೋಲ್ಕಲಿ, ಒಪ್ಪನ, ಮತ್ತು ದಫ್  ಜಾನಪದ ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು. 
 1. ಯಕ್ಷಗಾನ ತಾಳಮದ್ದಳೆ ಸಪ್ತಾಹ 2019: ಅಕಾಡೆಮಿ ಮತ್ತು ಯಕ್ಷಾಂಗಣ ಮಂಗಳೂರು ಇದರ ಸಹಯೋಗದಲ್ಲಿ ದಿನಾಂಕ: 17 ನವಂಬರ್ 2019 ರಿಂದ 23 ವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯಕ್ಷಗಾನ ತಾಳಪಮದ್ದಳೆ ಸಪ್ತಾಹ -ಸಂಧಾನ ಸಪ್ತಕ- ಪ್ರಶಸ್ತಿ ಪ್ರದಾನ-ಸರಣಿ ಸಂಸ್ಮರಣ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
 2. ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ : ಅಕಾಡೆಮಿ ಮತ್ತು ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ಸಹಯೋಗದಲ್ಲಿ ದಿನಾಂಕ: 06-03-2020 ರಿಂದ 12-03-2020 ವರೆಗೆ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
 3. ರಾಜ್ಯ ಪತ್ರಕರ್ತರ ಸಮ್ಮೇಳನ : ಅಕಾಡೆಮಿ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಇದರ ಸಹಯೋಗದಲ್ಲಿ ದಿನಾಂಕ: 7 ಮತ್ತು 8 ಮಾರ್ಚ್ 2020 ರಂದು ಮಂಗಳೂರು ಪುರಭವನದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಏರ್ಪಡಿಸಲಾಯಿತು.
 4. ಅಕಾಡೆಮಿ ವತಿಯಿಂದ ಅಶಕ್ತ ಬ್ಯಾರಿ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತಣೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ.ರವಿಯವರ ಮಾರ್ಗದರ್ಶನದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ: 17-04-2020 ರಂದು 100 ಅರ್ಹ ಕವಿ, ಸಾಹಿತಿ ಹಾಗೂ ಕಲಾವಿದರ ಕುಟುಂಬಕ್ಕೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ನ್ ನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಾಂಕೇತಿಕವಾಗಿ ವಿತರಿಸಿದರು. ಈ  ಸಂದರ್ಭದಲ್ಲಿ ಸಚಿವರು ಮಾತನಾಡುತ್ತಾ ಕೋರೋನಾ ಸಮಸ್ಯೆಯಿಂದ ಉಂಟಾದ ಲಾಕ್ ಡೌನ್ ನ  ಸಂದರ್ಭದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಮನೆ ಮನೆ ತೆರಳಿ ಆಹಾರ ಕಿಟ್ ನೀಡುತ್ತಿರುವ ಅಕಾಡೆಮಿ ಸೇವೆ ಶ್ಲಾಘನೀಯ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಶ್ರೀ ದಿವಾಕರ್, ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್ ರವರು ಮಾತನಾಡಿ ಕವಿ, ಸಾಹಿತಿ ಮತ್ತು ಕಲಾವಿದರು ಕಷ್ಟಗಳಿಂದ ದೂರವಾಗಿ ಸಂತೃಪ್ತಿಯಿಂದ ಇದ್ದರೆ ಮಾತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಸಾಧ್ಯ. ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ಸಾಹಿತಿ ಕಲಾವಿದರಿಗೆ ಯಾವುದೇ ಆದಾಯ ಇರುವುದಿಲ್ಲ ಇಂತವರ ಮನಸ್ಥಿತಿಯನ್ನು ಅರ್ಥಮಾಡಿಕೊಮಡು ಈ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಮಾಡುವ ಅವಕಾಶ ಒದಗಿರುವುದು ನಮ್ಮ ಸೌಭಾಗ್ಯ ಎಂದು ಅಭಿಪ್ರಾಯ ಪಟ್ಟರು.  ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಮುರಳಿರಾಜ್, ರೂಪೇಶ್, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾದ  ರಾಶ್ ಬ್ಯಾರಿ , ಮುನ್ನ ಕಮ್ಮರಡಿ, ಸಿದ್ದಿಕ್ ಮಂಜೇಶ್ವರ, ಫಾರೂಕ್ ಆತೂರು ಇಮ್ರಾನ್ ಉಪ್ಪಿನಂಗಡಿ ಖಾಲಿದ್ ನಂದಾವರ  ಉಪಸ್ಥಿತರಿದ್ದರು.
 1. ಸಾರ್ವಜನಿಕ ಮಹಿಳೆಯರಿಗೆ ಮೆಹಂದಿ ಸ್ಪರ್ಧೆ: ಅಕಾಡೆಮಿ ವತಿಯಿಂದ 2020 ಕೋರೊನ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿರುವಂತಹ ಮೆಹೆಂದಿ ಬಿಡಿಸುವ ಮಹಿಳಾ ಕಲಾವಿದರಿಗೆ ಮೆಹೆಂದಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಪ್ರಥಮ ಬಹಮಾನ ರೂ. 5000/- ವನ್ನು ಆಯಿಶಾ ತಸ್ಲೀಮ , ದ್ವೀತಿಯ ಬಹುಮಾನ ರೂ.3000/- ವನ್ನು ಸುಮಯ್ಯ ಆಯಿಷ, ತೃತೀಯ ಬಹುಮಾನ ರೂ. 2000/- ವನ್ನು ಸಲ್ಮಾ ಆಶಿಲ ಇವರು ಪಡೆದುಕೊಂಡರು, ಇದಲ್ಲದೆ 5 ಮಂದಿಗೆ ಆಕರ್ಷಕ ಬಹುಮಾನ, ಮತ್ತು 20 ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪ್ರಶಸ್ತಿಯನ್ನು ಅಕಾಡೆಮಿ ಕಚೇರಿಯಲ್ಲಿ ದಿನಾಂಕ: 15-06-220 ರಂದು ಅಕಾಡೆಮಿ ಅಧ್ಯಕ್ಷರು, ರಿಜಿಸ್ಟ್ರಾರ್ ಮತ್ತು ಸದಸ್ಯರ ಸಮ್ಮುಖದಲ್ಲಿ  ನೀಡಲಾಯಿತು.  
 1. ಬ್ಯಾರಿ ಸ್ವರಚಿತ ಕವನ ಸ್ಪರ್ಧೆ : ಅಕಾಡೆಮಿ ವತಿಯಿಂದ 20 ಸಾಲುಗಳಿಗೆ ಮೀರದಂತೆ “ಕೋರೋನ  ಲಾಕ್ ಡೌನ್  ಸಂದರ್ಭದಲ್ಲಿ ನಡೆದ ಆಗು ಹೋಗುಗಳ ವಿಷಯದಲ್ಲಿ ಸ್ವರಚಿತ ಬ್ಯಾರಿ ಕವನ ಸ್ಪರ್ಧೆಯನ್ನು ಏರ್ಪಡಿಸಲಾಯಿತು.  ಪ್ರಥಮ ಬಹುಮಾನ ರೂ.5000/- ವನ್ನು ಅನ್ಸಾರ್ ಕಾಟಿಪಳ್ಳ, ದ್ವೀತೀಯ ಬಹುಮಾನ ರೂ. 3000/- ವನ್ನು ಹಫ್ಸಾ ಬಾನು ಬೆಂಗಳೂರು ಮತ್ತು ತೃತೀಯ ಬಹುಮಾನ ರೂ. 2000/- ವನ್ನು ಸಫ್ವಾನ್ ಕೂರತ್ ಇವರು ಪಡೆದುಕೊಂಡರು. ಮತ್ತು 25 ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. 
 1. ಅಕಾಡೆಮಿಯ ನೂತನ ಕಚೇರಿ ಸ್ಥಳಾಂತರ ಉದ್ಘಾಟನಾ ಸಮಾರಂಭ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕಳೆದ 11 ವರ್ಷಗಳಿಂದ ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ಮತ್ತು ಸಾಂಸ್ಕೃತಿಕ  ಕ್ಷೇತ್ರಕ್ಕೆ ಸಂಬಂದಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅಕಾಡೆಮಿ ಕಚೇರಿಯನ್ನು ಮಂಗಳೂರು ತಾಲೂಕು ಪಂಚಾಯತ್ ನ ಹಳೇ ಕಟ್ಟಡ ಸಾಮರ್ಥ್ಯ ಸೌಧದ ಎರಡನೇ ಮಹಡಿಗೆ ದಿನಾಂಕ: 15-06-2020 ರ ಸೋಮವಾರ ಸಂಜೆ 4.00 ಗಂಟೆಗೆ ಸರಿಯಾಗಿ  ದಕ್ಷಿಣ ಕನ್ನಡ ಜಿಲ್ಲಾ ಉ್ತಸುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್ ರವರು ವಹಿಸಿದ್ದರು, ಮುಖ್ಯ ಅತಿಥಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸದಾನಂದ, ತುಳು ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ ಕತ್ತಲ್ ಸಾರ್, ಭಾಗವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ಶ್ರೀ ಜಲೀಲ್ ಮುಕ್ರಿ, ಶ್ರೀಮತಿ ಮಿಶ್ರಿಯಾ ಮೈಸೂರು, ಶ್ರೀಮತಿ ಚಂಚಲಾಕ್ಷಿ, ಶ್ರೀಮತಿ ಸುರೇಕಾ, ಶ್ರೀ ಮುರಳೀರಾಜ್ ಶ್ರೀ ರೂಪೇಶ್ ಕುಮಾರ್  ಉಪಸ್ಥಿತರಿದ್ದರು. 
 1. ಅಕಾಡೆಮಿಯ 6 ಪ್ರಕಟಿತ ಪುಸ್ತಕ ಮತ್ತು ಹಾಡಿನ ಸಿಡಿ ಬಿಡುಗಡೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಆರು ಬ್ಯಾರಿ ಪುಸ್ತಕಗಳು ಮತ್ತು ಹಾಡಿನ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ: 13-07-2020ರ ಸೋಮವಾರದಂದು ತಾಲೂಕು ಪಂಚಾಯತ್ ಹೊಸಕಟ್ಟಡದ ಸಭಾಭವನದಲ್ಲಿ ನಡೆಸಲಾಯಿತು. ಲೇಖಕರಾದ ಫಕ್ರುದ್ದಿನ್ ಇರುವೈಲ್ ಬರೆದ ಮೂನು ಮಿನಿ ಕಾದಂಬರಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು ಬರೆದ ಬ್ಯಾರಿ ಪಂಚತಂತ್ರ, ಅನ್ಸಾರ್ ಕಾಟಿಪಳ್ಳ ಬರೆದ ಅಂಗಲಾಫು, ಶಂಶೀರ್ ಬುಡೋಳಿ ಬರೆದ ಪಿರ್ಸತ್ತೊ ಪಲಕ, ಹಾರೂನ್ ರಶೀದ್ ಬರೆದ ಪಾರ್‍ರೊ ಪಕ್ಕಿ, ಬಿ.ಎ ಷಂಶುದೀನ್ ಬರೆದ ನೆನಪುಙ ಹೀಗೆ 6 ಪುಸ್ತಕಗಳು ಮತು ಹುಸೈನ್ ಕಾಟಿಪಳ್ಳ ಮತ್ತು ಬಶೀರ್ ಅಹ್ಮದ್ ಕಿನ್ಯ ರಚಿಸಿದ ಬ್ಯಾರಿ ಹಾಡಿನ ಸಿಡಿ ಕಸವೊವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್‍ಸಾರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರು ವಹಿಸಿದ್ದರು. ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಶಂಶೀರ್ ಬುಡೋಳಿಯವರು ಕೃತಿಗಳನ್ನು ಪರಿಚಯಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಸಫೀಸ ಮಿಸ್ರಿಯಾ, ತುಳು ಅಕಾಡೆಮಿ ಸದಸ್ಯರಾದ ಚೇತಕ್ ಪೂಜಾರಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಜಲೀಲ್ ಮುಕ್ರಿ ವಂದಿಸಿದರು ಮತು ಅಬ್ದುಲ್ ರಜಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸದರು.
 2. ಬ್ಯಾರಿ ಅಕಾಡೆಮಿಯಿಂದ ಬ್ಯಾರಿ ಲಿಪಿ ಬಿಡುಗಡೆ ಕಾರ್ಯಕ್ರಮ : ಬ್ಯಾರಿ ಅಕಾಡೆಮಿ ಅಧಿಕೃತವಾಗಿ ರಚಿಸಿದ ಬ್ಯಾರಿ ಭಾಷೆಯ ಸ್ವಂತ ಲಿಪಿಯನ್ನು ದಿನಾಂಕ: 11-09-2020ರ ಶುಕ್ರವಾರದಂದು ಮಂಗಳೂರು ತಾಲೂಕು ಪಂಚಾಯತ್‍ನ ಹೊಸ ಕಟ್ಟಡದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿ ರಚಿಸುವ ಪ್ರಯತ್ನಗಳು ನಡೆಯುತ್ತಲಿದ್ದು, ಅಬ್ದುಲ್ ಸವiದ್ ಬಾವಾ ಪುತ್ತೂರು ಮತ್ತು ಕಲ್ಲಿಕೋಟೆಯ ಡಾ.ಮುಹಮ್ಮದ್ ಫೌಝೀದ್ ಲಿಪಿ ರಚನೆಯ ಬಗ್ಗೆ ಆಸಕ್ತಿ ಹೊಂದಿದ್ದು ಅದನ್ನು ಅಕಾಡೆಮಿ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದರು. ಇದೀಗ ಕಳೆದ ವರ್ಷ ನೂತನವಾಗಿ ನೇಮಕಗೊಂಡ ಅಕಾಡೆಮಿಯ ರಚನಾ ಸಮಿತಿಯು ಲಿಪಿಯ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಗಂಭಿರ ಕಾರ್ಯಯೋಜನೆಯಾಗಿ ಪರಿಗಣಿಸಿ ಬ್ಯಾರಿ ಲಿಪಿ ರಚನೆ ಸಂಶೋಧನೆ, ಪರಿಶೀಲನೆ ಅದರ ಅಂಗೀಕಾರ ಮತ್ತು ಅನುಷ್ಠಾನ ಸಮಿತಿಯನ್ನು ತನ್ನ ಅಧ್ಯಕ್ಷತೆಯಲ್ಲಿ ರಚಿಸಿತು. ಈ ಸಮಿತಿಯ ನಿರಂತರ ಪರಿಶ್ರಮದ ಫಲವಾಗಿ ಹಲವು ಸುತ್ತಿನ ಚರ್ಚೆ, ಪರೀಶೀಲನೆ, ಪರಿಷ್ಠಕರಣೆ ಬಳಿಕ ಬ್ಯಾರಿ ಭಾಷಾ ಲಿಪಿಯನ್ನು ಬ್ಯಾರಿ ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ್ದು ಬಾಷಾ ಜಗತ್ತಿಗೆ ಹೊಸ ಬ್ಯಾರಿ ಲಿಪಿಯೊಂದನ್ನು ಪರಿಚಯಿಸಲು ಹೆಮ್ಮೆ ಪಡುತ್ತಿದೆ. ಆ ಮೂಲಕ ಬ್ಯಾರಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲ ಎಂಬ  ಕೊರತೆಯನ್ನು ನೀಗಿಸಿ ಭಾಷಾ ಜಗತ್ತಿಗೆ ಬ್ಯಾರಿ ಭಾಷಾ ಲಿಪಿಯನ್ನು ಲೋಕಾರ್ಪಣೆಗೊಳಿಸಲಾಯಿತು, ಇದೊಂದು ಐತಿಹಾಸಿಕ ಬೆಳವಣಿಗೆ ಎಂದೇ ಅಕಾಡೆಮಿ ಪರಿಗಣಿಸುತ್ತದೆ ಎಂದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಬ್ಯಾರಿ ಲಿಪಿ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್ ಅನಂತಾಡಿ, ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಡಾ.ಅಬೂಬಕ್ಕರ್ ಸಿದ್ದಿಕ್, ಹೈದರ್ ಆಲಿ, ಎ.ಕೆ.ಕುಕ್ಕಿಲ, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅಬ್ದುಲ್ ಸಮದ್ ಬಾವಾ ಪುತ್ತೂರು, ಹಂಝ ಮಲಾರ್, ಅಕಾಡೆಮಿ ಸದಸ್ಯರಾದ ರೂಪಶ್ರೀ ವರ್ಕಾಡಿ ಮತ್ತು ಶಂಶೀರ್ ಬುಡೋಳಿ ಉಪಸ್ಥಿತರಿದ್ದರು.
 3. ತುಳು ಭವನ : “ಯಕ್ಷಗಾನ ,ಬ್ಯಾರಿ ಸಂಬಂದ ವಿಚಾರ ಸಂಕೀರಣ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವುಗಳ ಸಹಯೋಗದೊಂದಿಗೆ ‘ಯಕ್ಷಗಾನ ಮತ್ತು ಬ್ಯಾರಿ ಸಂಬಂಧ ಎಂಬ ವಿಷಯದ ಬಗ್ಗೆ ವಿಚಾರ ಸಂಕೀರಣ ದಿನಾಂಕ :21.11.2020 ಶುಕ್ರವಾರದಂದು ತುಳು ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಮಾತನಾಡಿ ,ತುಳು ಮತ್ತು ಬ್ಯಾರಿ ಭಾಷೆಯ ಬಾಂದವ್ಯ ಬೆಸೆಯಲು ಈ ಕಾರ್ಯಕ್ರಮ ಸಹಕಾರಿ ,ಬಪ್ಪ ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ,ಬ್ಯಾರಿ ಭಾಷೆ ,ಸಾಹಿತ್ಯ ,ಸಂಸ್ಕ್ರತಿ ಉಳಿಸಲು ಅಕಾಡೆಮಿ ನಿರಂತರ ಶ್ರಮಿಸುತ್ತದೆ. ಐತಿಹಾಸಿಕ ಗ್ರಂಥ ,ಶಬ್ದಕೋಶವನ್ನು ಬಿಡುಗಡೆ ಮಾಡಲಾಗುವುದು ಎಂದರು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ.ಅವರು “ಬೆಲ್ಕಿರಿ” ದ್ವೈಮಾಸಿಕ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅವರನ್ನು ಸಮ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅವರು “ಯಕ್ಷಗಾನ ಮತ್ತು ಬ್ಯಾರಿ ಸಂಬಂಧ” ಎಂಬ ವಿಷಯದ ಬಗ್ಗೆ ವಿಚಾರ ಸಂಕೀರಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ,ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಚಂಚಲಾಕ್ಷಿ ಸುರೇಖಾ ,ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ ಉಪಸ್ತಿತರಿದ್ದರು.ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ನಿರೂಪಿಸಿzರು. ಗಿರೀಶ್ ರೈ ಕಕ್ಕೆಪದವು ಬಳಗದಿಂದ ಬಪ್ಪ ಬ್ಯಾರಿ ಎಂಬ ಯಕ್ಷಗಾನ ನಡೆಯಿತು.
 4. ಬ್ಯಾರಿ ಭಾಷಾ ದಿನಾಚರಣೆಯಲ್ಲಿ ಶಬ್ದಕೋಶ ಬಿಡುಗಡೆ, ಸನ್ಮಾನ “ಬ್ಯಾರಿಕನ್ನಡಇಂಗ್ಲೀಷ್-ಹಿಂದಿ-ರೋಮನ್-ಐಪಿ ಲಿಪಿಯ ಶಬ್ದಕೋಶ ಬಿಡುಗಡೆ : ಕರ್ನಾಟಕ ಸರಕಾರವು 2007 ರ ಅಕ್ಟೋಬರ 3 ರಂದು ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ರಚಿಸಿ ಆದೇಶ ಹೊರಡಿಸಿದೆ. ಹಾಗಾಗಿ ಅಂದಿನ ದಿನವನ್ನು “ಬ್ಯಾರಿ ಭಾಷಾ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗಿತ್ತಿದೆ. ಕೊರೋನಾ ಕಾರಣದಿಂದಾಗಿ 2020 ಅಕ್ಟೋಬರ 3 ರಂದು ನಡೆಯಬೇಕಿದ್ದ ಬ್ಯಾರಿ ಭಾಷಾ ದಿನಾಚರಣೆಯನ್ನು 2020 ನವಂಬರ 21 ರಂದು ಶನಿವಾರ ಆಚರಿಸಲಾಯಿತು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಬ್ಯಾರಿ-ಕನ್ನಡ-ಇಂಗ್ಲೀಷ್-ಹಿಂದಿ-ರೋಮನ್-ಐಪಿಯನ್ನು ಒಳಗೊಂಡ ಶಬ್ದಕೋಶದ ಬಿಡುಗಡೆ ಕಾರ್ಯಕ್ರಮವು ಮಂಗಳೂರು ತಾಲೂಕು ಪಂಚಾಯತ್ ಹೊಸ ಕಟ್ಟಡದಲ್ಲಿ ಶನಿವಾರ ನಡೆಯಿತು. ಶಬ್ದಕೋಶ ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ,ಕಳೆದ 11 ವರ್ಷಗಳಲ್ಲಿ ಭಾಷಾ ಅಕಾಡೆಮಿಗಳ ಪೈಕಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅನೇಕ ಮಹತ್ವದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಬ್ಯಾರಿಯೇತರಿಗೆ ಬ್ಯಾರಿ ಭಾಷೆ ಕಲಿಯುವ ಸಲುವಾಗಿ ಹೊಸ ಮಾದರಿಯ ಶಬ್ದಕೋಶ ಹೊರತಂದಿರುವುದು ಶ್ಲಾಘನೀಯ ಎಂದರು. ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಬ್ದಕೋಶ ಕೃತಿಯ ಮಾರ್ಗದರ್ಶಕರಾದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡ|ಅಲ್ವಿನ್ ಡೇಸಾರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಮಂಗಳೂರು ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು ,ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಬಿ.ಅಪ್ಪಾಜಿ ಗೌಡ ಭಾಗವಹಿಸಿದ್ದರು.ಬ್ಯಾರಿ ಭಾಷಾ ದಿನಾಚರಣೆಯ ಬಗ್ಗೆ ಅಬ್ದುಲ್ ರಝಾಕ್  ಅನಂತಾಡಿ ರವರು ಉಪನ್ಯಾಸಕ  ನೀಡಿದರು. ರಿಜಿಸ್ಟ್ರಾರ್ ಪೂರ್ಣಿಮಾ ಬ್ಯಾರಿ ಭಾಷೆಯಲ್ಲೇ ಸ್ವಾಗತಿಸಿ ಗಮನಸೆಳೆದರು. ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ,ರಾಧಾಕೃಷ್ಣ ನಾವಡ ಉಪಸ್ಥಿತರಿದ್ದರು.ಸದಸ್ಯ ಅಬ್ದುಲ್ ರಝಾಕ್  ಸಾಲ್ಮರ ಕಾಯಾಕ್ರಮ ನಿರೂಪಿಸಿದರು.
 5. ಬ್ಯಾರಿ ಸಾಹಿತ್ಯ ಅಕಾಡೆಮಿಯ 2018,2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ : ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 10-12-2020ರಂದು ಬ್ಯಾರಿ ಸಾಧಕರಿಗೆ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾgವನ್ನು ಪ್ರದಾನ ಮಾಡಲಾಯಿತು. ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ,2018, 2019 2020 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಬ್ಯಾರಿ ಲಿಪಿ ಸಂಶೋಧನಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ,ಮಂಗಳೂರು ಶಾಸಕ ಯು.ಟಿ.ಖಾದರ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್.ರಂಗಪ್ಪ, ಯುವಜಾಗೃತಿ ಬಳಗದ ಅಧ್ಯಕ್ಷೆ ಮತ್ತು ನಟಿ ಪ್ರಾಚೀಗೌಡ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಿದ್ದರು.ಅಕಾಡೆಮಿ ಸದಸ್ಯರಾದ ನಝೀರ್ ಪೊಲ್ಯ ,ಸುರೇಖಾ ,ರೂಪಶ್ರೀ ವರ್ಕಾಡಿ ಉಪಸ್ಥಿತರಿದ್ದರು. ರಿಜಿಸ್ಡ್ರಾರ್ ಪೂರ್ಣಿಮಾ ಸ್ವಾಗತಿಸಿದರು.ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಂಗೀತ, ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 
 1. ಮರಕೊಗು ಆವಾತೊ ಮರ್ಹೂಂ ಬ್ಯಾರಿಙ ಗ್ರಂಥ ಅನಾವರಣ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹೊರತಂದ “ಮರಕೊಗು ಆವಾತೊ ಮರ್ಹೂಂ ಬ್ಯಾರಿಙ” (ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು) ಗ್ರಂಥ ಮತ್ತು “ಬ್ಯಾರಿ ಹಿರಿಯಙಲೊ ಕಲ್ಬು ನೊರಞೂ ಪಲಕ” ( ಬ್ಯಾರಿ ಹಿರಿಯರ ಮನದಾಳದ ಮಾತು) ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 18.12.2020 ಶುಕ್ರವಾರ ನಗರದ ಹೊಟೀಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ “ಬ್ಯಾರಿ ಮುಸ್ಲಿಮ್ ಸಮುದಾಯದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಕಷ್ಟು ಮಂದಿಯಿದ್ದಾರೆ .ಆ ಪೈಕಿ ಮೊದಲ ಸಂಪುಟದಲ್ಲಿ ಅಗಲಿದ 123 ಮಂದಿಯ ಪರಿಚಯಾತ್ಮಕ ಲೇಖನಗಳನ್ನು ಒಳಗೊಂಡ ಗ್ರಂಥ ಹೊರಗೆ ತಂದಿರುವುದು ಶ್ಲಾಘನೀಯ ಎಂದರು. “ಮರೆಯಲಾಗದ ಗ್ರಂಥ”ವನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಬಿಡುಗಡೆಗೊಳಿಸಿದರು. “ಬ್ಯಾರಿ ಹಿರಿಯರ ಮನದಾಳದ ಮಾತು” ಸಾಕ್ಷ್ಯಚಿತ್ರವನ್ನು ಕಸಾಪ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡಿಗಡೆಗೊಳಿಸಿದರು. ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ|ಅಬೂಬಕ್ಕರ್ ಸಿದ್ದೀಕ್ ,ಬ್ಯಾರಿ ಅಧ್ಯಯನ ಪೀಠದ ಸದಸ್ಯ ಎಂ.ಅಹ್ಮದ್ ಬಾವ ಮೊಯ್ದಿನ್ ಪಡೀಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯರಾದ ಶಂಶೀರ್ ಬುಡೋಳಿ ,ನಝೀರ್ ಪೊಲ್ಯ ,ರೂಪಾಶ್ರೀ ವರ್ಕಾಡಿ ,ಸುರೇಖಾ ,ಚಂಚಲಾಕ್ಷಿ, ಮರಕೊಗ್ ಆವಾತೊ ಮರ್ಹೂಂ ಬ್ಯಾರಿಙ” ಗ್ರಂಥದ ಆಯ್ಕೆ ಸಮಿತಿಯ ಸದಸ್ಯರಾದ ಸಂಶುದ್ದೀನ್ ಮಡಿಕೇರಿ ,ಹನೀಫ್ ಹಾಜಿ ಗೋಳ್ತಮಜಲ್ ,ಕೆ.ಕೆ.ಶಾಹುಲ್ ಹಮೀದ್,ಅನ್ಸಾರ್ ಕಾಟಿಪಳ್ಳ ಸಫ್ವಾನ್ ಶಾ, ಸಂಪಾದಕ ಮಂಡಳಿಯ ಸದಸ್ಯರಾದ ಹಂಝಮಲಾರ್,ಆಯಿಶಾ ಯು.ಕೆ ಮತ್ತಿತರರು ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.  
 1. ಬ್ಯಾರಿ ಅಕಾಡೆಮಿಯ 2021 ರ ಕ್ಯಾಲೆಂಡರ್ ಬಿಡುಗಡೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಅನಾವರಣಗೊಳಿಸಿರುವ ನೂತನ ಬ್ಯಾರಿ ಲಿಪಿ ಹಾಗೂ ಸಂಖ್ಯೆಯನ್ನು ಬಳಸಿಕೊಂಡು 2021 ರ ಹೊಸ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್ ) ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ 31-12-2020ರಂದು ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ,ಪ್ರತಿಯೊಂದು ಬ್ಯಾರಿ ಭಾಷಿಕರು ಸುಲಭವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ನೆನಪಿನಲ್ಲಿ ಉಳಿಯಲು ಈ ಬ್ಯಾರಿ ಕ್ಯಾಲೆಂಡರ್ ಸಹಾಯವಾಗಲಿದೆ.ಈ ಐತಿಹಾಸಿಕ ಹೆಜ್ಜೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ|ಅಬೂಬಕರ್ ಸಿದ್ದೀಕ್ ಪ್ರಾದೇಶಿಕ ಭಾಷೆಗಳನ್ನು ಸರಕಾರ ಬೆಳೆಸಿ ಪೋಷಿಸುವುದು ಶ್ಲಾಘನೀಯ ಎಂದರು.ಬ್ಯಾರಿ ಭಾಷಾ ಲಿಪಿ ರಚನಾ, ಸಂಶೋಧನೆ ಮತ್ತು ಅನುಷ್ಠಾನ ಸಮೀತಿಯ ಸದಸ್ಯ ಅಬ್ದುರ್ರಹ್ಮಾನ್ ಕುತ್ತೆತ್ತೂರು ಮಾತನಾಡಿ, ಬ್ಯಾರಿ ಭಾಷೆಯ ನೂತನ ಲಿಪಿಯನ್ನು ಜನಮನಕ್ಕೆ ಪರಿಚಯಿಸುವ ಹೊಸ ಪ್ರಯತ್ನ ಇದಾಗಿದೆ.ಕಲಿಕಾ ಮತ್ತು ಬೋಧನಾ ಕ್ರಮಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.ಲಿಪಿ ಸಂಶೋಧನಾ ಸಮಿತಿ ಸದಸ್ಯ ಸಹಾಯಕ ಪ್ರಾಧ್ಯಾಪಕ ಹೈದರಲಿ ,ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ, ರೂಪಾಶ್ರೀ ವರ್ಕಾಡಿ ಸಾಮಾಜಿಕ ಕಾರ್ಯಕರ್ತ ಬಶೀರ್ ತಂಡೆಲ್ ಉಪಸ್ಥಿತರಿದ್ದರು.ಅಕಾಡೆಮಿಯ ರಿಜಿಸ್ಡ್ರಾರ್ ಪೂರ್ಣಿಮಾ ಸ್ವಾಗತಿಸಿದರು.ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
 2. ಕಾರವಾರದಲ್ಲಿ ಬಹುಭಾಷಾ ಸಾಂಸ್ಕೃತಿಕ ಸಂಭ್ರಮ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಹೃದಯವಾಹಿನಿ ಮಂಗಳೂರು ಇದರ ಸಹಯೋಗದಲ್ಲಿ ಕರ್ನಾಟಕ ತುಳು,ಕೊಂಕಣಿ,ಅರೆಭಾಷೆ,ಕೊಡವ ಸಾಹಿತ್ಯ ಅಕಾಡಮಿಗಳ ಸಹಕಾರದಲ್ಲಿ ಬಹುಭಾಷಾ ಸಾಂಸ್ಕøತಿಕ ಸಂಭ್ರಮ 2021 ಕಾರ್ಯಕ್ರಮವು ದಿನಾಂಕ: 06-02-2021 ರಂದು ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ,ಬ್ಯಾರಿ ಭಾಷೆಯನ್ನು ಉಳಿಸಲು ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ. ಹೊಸ ಲಿಪಿಯನ್ನು ಕಂಡು ಹಿಡಿಯುವ ಮೂಲಕ ಭಾಷೆಯನ್ನು ಉಳಿಸುವ ಜೊತೆಗೆ ಸರಕಾರದಿಂದ ಬ್ಯಾರಿ ಭಾಷೆಗೆ ಮಾನ್ಯತೆ ದೊರಕಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಢಾ|ಅಮ್ಮತಂಡ ಪಾರ್ವತಿ ಅಪ್ಪಯ್ಯ ,ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿದರು. ಡಾ|ಜೆ.ಆರ್.ಮನೋಜ್ ಶರ್ಮ ಗುರೂಜಿ ಆಶೀರ್ವಚನ ಮಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಎನ್.ಜಿ.ನಾಯಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಳಿಕ ಬಹುಭಾಷಾ ವಿಚಾರಗೋಷ್ಠಿ ನಡೆಯಿತು. ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ರಾಮ ನಾಯ್ಕ ಕಾರವಾರ (ಕನ್ನಡ), ಕಾಂತಿ ಶೆಟ್ಟಿ (ತುಳು), ಡಾ.ಅರವಿಂದ್ ಶಾನಬಾಗ (ಕೊಂಕಣಿ),ಪುರುಷೋತ್ತಮ ಕಿರ್ಲಾಯ (ಅರೆಭಾಷೆ),ಡಾ.ಮುಲ್ಲೇಂಗಡ ರೇವತಿ ಪೂವಯ್ಯ (ಕೊಡವ) ವಿಚಾರ ಮಂಡಿಸಿದರು.ಬಿ.ಎ ಮುಹಮ್ಮದ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಕಾಸರಗೋಡು ಅಶೋಕ್ ಕುಮಾರ್ (ಕನ್ನಡ),ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ (ತುಳು), ನಾಗೇಶ್ ಅಣ್ವೇಕರ (ಕೊಂಕಣಿ) ,ಕುಡಿಯರ ಮುತ್ತಪ್ಪ (ಕೊಡವ),ಸೀತಾ ಅಮೃತ ರಾಜ್ (ಅರೆಭಾಷೆ)ಕವನ ವಾಚಿಸಿದರು.ನಂತರ ಹುಸೈನ್ ಕಾಟಿಪಳ್ಳ ಮತ್ತು ತಂಡ (ಬ್ಯಾರಿ),ಗೋನಾ ಸ್ವಾಮಿ ಮತ್ತು ತಂಡ (ಕನ್ನಡ ),ಕುಂಜಿಲಗೇರಿ ಕಲಾ ತಂಡ (ಕೊಡವ),ಕಲಾಕುಂಬ ಕುಳಾಯಿ (ತುಳು),ಮಿತ್ರ ಬಳಗ ಕಾಂರ್ತೋಡಿ (ಅರೆಭಾಷೆ) ,ವಿಷ್ಣು ರಾಣೆ ಗುಮುಟಾ ವಾದನ ಕಿನ್ನರ ಕಾರವಾರ (ಕೊಡವ),ವಿಜೇತ ಭಂಡಾರಿ ನೃತ್ಯ ಸ್ವರ ಕಲಾ ಟ್ರಸ್ಟ್ ಕುಮುಟಾ ,ಅನುರಾಧಾ ಹೆಗಡೆ ನೂಪುರ ನೃತ್ಯಶಾಲೆ ಶಿರಸಿ ಇವರಿಂದ ಬಹುಭಾಷಾ ವೈವಿಧ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉ.ಕ.ಜಿಲ್ಲೆಯ ಸಾಹಿತ್ಯ ಪರಿಷತ್‍ನ ಪೂರ್ವಾಧ್ಯಕ್ಷ ರೋಹಿದಾಸ್ ನಾಯಕ್ ,ಗೋವಾ ಕೇಸರಿಯ ಸಂಪಾದಕ ಶ್ರೀನಿವಾಸ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಭಾಷಾ ಸಾಧಕರಾದ ಲ.ಇಬ್ರಾಹೀಂ (ಕನ್ನಡ),ಸೋಶಿಯಲ್ ಫಾರೂಕ್ (ಬ್ಯಾರಿ),ಪ್ರಭಾಕರ್ ಕಲ್ಯಾಣಿ (ತುಳು),ಪ್ರೇಮಾನಂದ ಗಡಕರ (ಕೊಂಕಣಿ),ಓಡಿಯಂಡ ಪೊನ್ನಪ್ಪ (ಕೊಡವ), ಕುದುಕುಳಿ ಮಿಲನ ಭರತ್ (ಅರೆಭಾಷೆ)ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಬ್ಯಾರಿ,ತುಳು,ಕೊಂಕಣಿ ,ಕೊಡವ, ಅರೆಭಾಷೆ ಅಕಾಡೆಮಿಯ ಸದಸ್ಯರು ಇದ್ದರು. ಹುಸೈನ್ ಕಾಟಿಪಳ್ಳ ಮತ್ತು ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.
 3. ವಿಶ್ವ ಸ್ಥಳೀಯ ಭಾಷಾ ದಿನಾಚರಣೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2021 ಫೆಬ್ರವರಿ 21  ರಂದು ಅಪರಾಹ್ನ 3 ಕ್ಕೆ ವಿಶ್ವ ಸ್ಥಳೀಯ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಹರೀಶ್ ಎ. ಹಾಗೂ ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿ ಡಾ.ನಾಗರತ್ನ ಕೆ.ಎ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಂಗಳೂರು ಸಂಗೀತ ಮತ್ತು ಸಾಂಸ್ಕøತಿಕ ಕಲಾವಿದರಾದ ಪುಷ್ಕಳ ಕುಮಾರ್ (ಕನ್ನಡ),ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ತುಳು ವಿಭಾಗದ ನಿವೃತ್ತ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕಣ್ವತೀರ್ಥ (ತುಳು),ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸ್ನಾತ್ತಕೋತ್ತರ ಕೊಂಕಣಿ ವಿಭಾಗದ ಸಂಯೋಜಕ ಡಾ.ದೇವದಾಸ್ ಪೈ(ಕೊಂಕಣಿ),ಸಾಹಿತಿ ಅಬ್ದುರ್ರಹ್ಮಾನ್ ಕುತ್ತೆತೂರು(ಬ್ಯಾರಿ),ಮಂಗಳೂರು ವಿವಿ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಮೀನಾಕ್ಷಿ ಎಂ.ಎಂ.(ಕೊಡವ),ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ (ಅರೆಭಾಷೆ)ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸ್ನಾತ್ತಕೋತ್ತರ ತುಳು ವಿಭಾಗದ ಅತಿಥಿ ಉಪನ್ಯಾಸಕ ಶ್ಯಾಮ್ ಪ್ರಸಾದ್ (ಹವ್ಯಕ ),ನಿವೃತ್ತ ಶಿಕ್ಷಕಿ ಸುಮಿತ್ರಾ ಜಿ.ಆಚಾರ್ಯ (ಶಿವಳ್ಳಿ ) ,ಬಿಮೂಡ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಅಬ್ದುಲ್ ರ್ರಝಾಕ್ ಅನಂತಾಡಿ (ಮಲಾಮೆ),ಮಂಗಳೂರು ವಿವಿ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು (ಕೊರಗ ),ಕಿನ್ಯದ ಶ್ರೀ ಶಾರದಾ ವಿದ್ಯಾನಕೇತನ ಪದವಿ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ (ತೀಯಾ),ಸೋಮೇಶ್ವರ ಉಚ್ಚಿಲದ ಸರಕಾರಿ ಫ್ರೌಢ ಶಾಲೆಯ ಮುಖ್ಯ ಚಂಚಲಾಕ್ಷಿ (ಮೋಯಾ),ಪಿ.ಎ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮುಹಮ್ಮದ್ ಅವ್ವಾದ್ (ನವಾಯತಿ) ,ಯಕ್ಷಗಾನ ಕಲಾವಿದ ಗಿರೀಶ್ ಐತಾಳ್ ಕರಂಬಳ್ಳಿ (ಕುಂದಾಪುರ ಕನ್ನಡ) ಮಂಗಳೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೀತಿ ಕೀರ್ತಿ ಡಿಸೋಜ (ಕ್ರಿಶ್ಚಿಯನ್ ಕೊಂಕಣಿ),ಪಿ.ಎ.ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ಸೈಯದ್ ಅಮೀನ್ (ಉರ್ದು) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
 4. ಮಾರ್ಚ್ 5 ರಂದು ಬಿ.ಎಂ ಇದಿನಬ್ಬ ಜನ್ಮ ಶತಮಾನೋತ್ಸವ: ಡಾ.ಮೋಹನ ಆಳ್ವರಿಗೆ ಬಿ.ಎಂ ಇದಿನಬ್ಬ ಸ್ಮಾರಕ ಗೌರವ ಪ್ರಶಸ್ತಿ, : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾಜಿ ಶಾಸಕ ,ಹಿರಿಯ ಕವಿ,ಸಾಹಿತಿ,ಸ್ವಾತಂತ್ರ್ಯ ,ಹೋರಾಟಗಾರ ಬಿ.ಎಂ ಇದಿನಬ್ಬರ ಜನ್ಮ ಶತಮಾನೋತ್ಸವವು 2021 ಮಾರ್ಚ್ 5 ರಂದು ನಗರದ ಪುರಭವನದಲ್ಲಿ ನಡೆಸಲಾಯಿತು.ಬಿ.ಎಂ ಇದಿನಬ್ಬ ನಾಡಿನ ದಿವ್ಯಚೇತನ .ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವಾಗ ಅನುಭವಳು ಅನುಭಾವಿಗಳಾಗಿತ್ತವೆ. ಇದಿನಬ್ಬರ ವ್ಯಕ್ತಿತ್ವ ಅನುಭಾವಿಯಾಗಿ ರೂಪುಗೊಂಡಿದೆ.ನಿಸ್ವಾರ್ಥಿಯಾಗಿದ್ದ ಅವರು ಕನ್ನಡಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ಸಾಹಿತ್ಯದಲ್ಲಿ ರಾಜನಾಗಿ ಮೆರೆಯುವ ಅವಕಾಶವಿದ್ದರೂ ಕನ್ನಡದ ಸೇವಕನಾಗಿ ಸಮಾಜಕ್ಕೆ ಆದರ್ಶ ಪ್ರಾಯರಾದರು.ಹೀಗೆ ತನ್ನ ನಡೆನುಡಿಯಿಂದ ಸಂತನಂತೆ ಬದುಕಿದ ಇದಿನಬ್ಬರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಪುರಭವನದ ಬಿ.ಎಂ ಇದಿನಬ್ಬ ವೇದಿಕೆಯಲ್ಲಿಂದು ನಡೆದ ಮಾಜಿ ಶಾಸಕ,ಹಿರಿಯ ಕವಿ,ಸಾಹಿತಿ,ಸ್ವಾತಂತ್ರ್ಯ ಹೋರಾಟಗಾರ ದಿ.ಬಿ.ಎಂ ಇದಿನಬ್ಬ ಜನ್ಮ ಶತಮಾನೋತ್ಸವ (ಮರ್ಹೂಂ ಬಿ.ಎಂ.ಇದಿನಬ್ಬ ನೂರು ವರ್ಸ ಒರು ನೆನಪು)ಕಾರ್ಯಕ್ರಮದಲ್ಲಿ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವರಿಗೆ ಬಿ.ಎಂ ಇದಿನಬ್ಬ ಸ್ಮಾರಕ ಗೌರವ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡುತ್ತಿದ್ದರು. ಸಾಹಿತ್ಯ ಮತ್ತು ನಡೆನುಡಿ ಮೂಲಕ ವ್ಯಕ್ತಿತ್ವ ಅನಾವರಣಗೊಳಿಸಿದ್ದ ,ಸಮಾಜಕ್ಕೆ ಒಳಿತನ್ನು ಬಯಸಿದ್ದ ಇದಿನಬ್ಬ ಕೋಟ್ಯಂತರ ಕನ್ನಡಿಗರ ಮನದಲ್ಲಿ ನೆಲೆ ನಿಂತವರಾಗಿದ್ದರು. ಇಂದು ಅವರು ಇದ್ದಿದ್ದರೆ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುತ್ತಿದ್ದರು ಎಂದರು.ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ,ಬಿ.ಎಂ ಇದಿನಬ್ಬ ಅವರು ಬ್ಯಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದರೂ ಅಪ್ಪಟ ಕನ್ನಡಿಗನಾಗಿ ಕನ್ನಡಿಗರ ಮನೆ ಮತ್ತು ಮನ ತಲುಪಿದರು. ಆದರ್ಶ ವ್ಯಕ್ತಿತ್ವದ ಅವರನ್ನು ಮುಂದಿನ ತಲೆಮಾರು ಮರೆಯಬಾರದು ಮತ್ತು ಸದಾ ನೆನಪಿನಲ್ಲಿಡುವಂತಾಗಬೇಕು. ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಸಂಸ್ಮರಣಾ ಭಾಷಣಗೈದ ಕಸಾಪ ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದಿನಬ್ಬರ ವೇµಭೂಷಣ ,ನಡೆನುಡಿಯಿಂದ ನಾನು ಪ್ರಭಾವಿತನಾಗಿದ್ದೆ.ಮೂಡಬಿದಿರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣವು ಸರಕಾರದ ಕಣ್ತೆರಿಸಿತ್ತು. ಕನ್ನಡದ ಕೋಗಿಲೆಯಂತಿದ್ದ ಅವರು ಕಡಲ ತಡಿಯ ಸಂತ ಎಂzರೂ ತಪ್ಪಾಗಲಾರದು. ಹಾಗಾಗಿ ಇದಿನಬ್ಬ್ರ ಹೆಸರನ್ನು ಸಾಹಿತ್ಯ ,ಕನ್ನಡ ಭವನ ವೇದಿಕೆ ಅಥವಾ ಪ್ರಮುಖ ರಸ್ತೆಗೆ ಇಡಬೇಕು ಎಂದರು.ಬಿ.ಎಂ ಇದಿನಬ್ಬ ತನ್ನ ರಾಜಕೀಯ ,ಸಾಮಾಜಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದವರು. ನಮಗೆಲ್ಲಾ ಅವರು ಮಾದರಿಯಾಗಿದ್ದರು. ವಿಶೇಷ ಅನುದಾನವಿಲ್ಲದಿದ್ದರೂ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ್ರು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ ಮಾತನಾಡಿದರು. ಕವಿಗೋಷ್ಠಿ : ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ  ನಡೆದ ಕವಿಗೋಷ್ಠಿಯಲ್ಲಿ ಭಾಸಕರ್ ರೈ ಕುಕ್ಕುವಳ್ಳಿ ,ತೋನ್ಸೆ ಪುಷ್ಕಳಕುಮಾರ್, ಬಿ.ಎ ಮುಹಮ್ಮದ್ ಅಲಿ,ಬಶೀರ್ ಅಹ್ಮದ್ ಕಿನ್ಯ,ಪ್ರೊ ಪ್ಲೋರಾ ಕ್ಯಾಸ್ತಲಿನೊ ಕವನ ವಾಚಿಸಿದರು. ಬಿ.ಎಂ ಇದಿನಬ್ಬ “ಬದುಕು ಮತ್ತು ಬರಹ” ಎಂಬ ವಿಷಯದಲ್ಲಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಮೊಹಿದಿನ್ ಪಡೀಲ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ,ಹಂಝಮಲಾರ್ ,ಉಳ್ಳಾಲ ದರ್ಗಾ ಆಡಳಿತ ಸಮಿತಿ ಸದಸ್ಯ ಫಾರೂಕು ಉಳ್ಳಾಲ್ ಮಾತನಾಡಿದರು.ಅಬ್ದುಸ್ಸಮದ್ ಮತ್ತು ಬಳಗದಿಂದ ಬ್ಯಾರಿ ಕವಾಲಿ, ಮುಹಮ್ಮದ್ ಫೈಝ್ ಮತ್ತು ಬಳಗದಿಂದ ಬ್ಯಾರಿ ಸಂಗೀತ ರಸಮಂಜರಿ ನಡೆಯಿತು.ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.
 5. ಪೆರ್ನಾಲ್ ಸಂದೋಲ ಉಡುಪಿ :ದಿನಾಂಕ: 10-03-2021 ರಂದು ಉಡುಪಿ ಲಯನ್ಸ್ ಕ್ಲಬ್ ನಲ್ಲಿ ಅಕಾಡೆಮಿ ವತಿಯಿಂದ ಪೆರ್ನಾಲ್ ಸಂದೋಲ ಕಾರ್ಯಕ್ರಮ ನಡೆಯಿತು. ಬ್ಯಾರಿ ಸಮುದಾಯದ ಏಳಿಗೆಯ ಉದ್ದೇಶದಿಂದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ. ಸಮುದಾಯದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಳಿ ತೆರಳಿ ಈ ಬೇಡಿಕೆಯನ್ನು ಸಲ್ಲಿಸಿ ,ಪ್ರಾಧಿಕಾರ ಘೋಷಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.  ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ನ್ನು ಬುಧವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪರಿಷತ್ ಅಧ್ಯಕ್ಷ ಹಾಜಿ ಎಸ್.ಪಿ.ಉಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಮಂಗಳೂರು ಬ್ಯಾರಿ ಸಾಹಿತ್ಯ ಮತ್ತು ಸಂಸ್ಕøತಿ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ,ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸದಗಯ ನಝೀರ್ ಪೊಲ್ಯ ,ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ,ಸಾಹಿತಿ ಟಿ.ಎಸ್.ಹುಸೈನ್ ಕಾಪು,ಕರ್ನಾಟಕ ಹಜ್ ಸಮಿತಿಯ ಮಾಜಿ ಸದಸ್ಯ ಸಲೀಂ  ಅಂಬಾಗಿಲು,ಕರ್ನಾಟಕ ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ರಫೀಕ್ ಬಿಎಸ್ ಎಫ್,ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ,ಬೈಂದೂರು ತಾಲೂಕು ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ಮನ್ಸೂರ್ ಮರವಂತೆ ಭಾಗವಹಿಸಿದ್ದರು. ಮುಹಮ್ಮದ್ ಶರೀಫ್ ನೀರ್ಮುಂಜೆ ಧ್ಯೇಯಗೀತೆ ಹಾಡಿದರು. ಪರಿಷತ್ ಹಿರಿಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್  ಹುಸೈನ್ ಬ್ಯಾರಿ ಸ್ವಾಗತಿಸಿzರು.ಸಂಘಟನಾ ಕಾರ್ಯದರ್ಶಿ ಇಸ್ಮಾಯೀಲ್ ಆತ್ರಾಡಿ ವಂದಿಸಿದರು.ಕೋಶಾಧಿಕಾರಿ ಖಾಸಿಂ ಬಾರಕೂರು ಉಪಸ್ಥಿತರಿದ್ದರು.ಹಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕøತಿಕ ಮತ್ತು ದಫ್ ಕಾರ್ಯಕ್ರಮ ನಡೆಯಿತು.  
 1. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಪಿ.ಸುಶೀಲಾ ಉಪಾಧ್ಯಾಯ ಸಂಸ್ಮರಣೆ ಕಾರ್ಯಕ್ರಮ:ಇಂದು ಬ್ಯಾರಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ, ಬ್ಯಾರಿ ಹೆಣ್ಣು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದೆ. ಅದನ್ನು ಪೋಷಿಸಿ ಪ್ರೋತ್ಸಾಯಿಸುವ ಕಾರ್ಯ ಮಾಡಬೇಕು. ನಮ್ಮೊಂದಿಗೆ ಇತರರನ್ನು ಕರೆದುಕೊಂಡು ಹೋಗಿವುದೇ ನಿಜವಾದ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲೆಯ ಸಹಾಯಕ ಅಭಿಯೋಗ ನಿರ್ದೇಶಕಿ ಮಮ್ತಾಜ್ ಹೇಳಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ.ಕಾರಂತ ಪ್ರತಿಷ್ಠಾನದ  ಸಹಕಾರದಲ್ಲಿ  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟ ಕಾರಂತ ಥೀಮ್ ಪಾರ್ಕ್‍ನಲ್ಲಿ  20-03-2021ರಂದು  ಆಯೋಜಿಸಲಾದ ಅಕಾಡೆಮಿಯ ಪ್ರಥಮ  ಅವಧಿಯ ಸದಸ್ಯರಾಗಿದ್ದ ಡಾ.ಪಿ.ಸುಶೀಲಾ  ಉಪಾಧ್ಯಾಯರವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿರಿಯಡ್ಕ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನಾ, ಸುಶೀಲ ಉಪಾಧ್ಯಾಯರವರ ಸಂಸ್ಮರu ಕುರಿತು ವಿಶೇಷ ಉಪನ್ಯಾಸ ನೀಡಿ ,ಸುಶೀಲಾ ಉಪಾಧ್ಯಾಯರು ಮಹಾ ಮಾನವತವಾದಿ ,ಸಾಧಕರಿಗೆ ಜಾತಿ ,ಲಿಂಗ, ಭಾಷೆ,ಬಣ್ಣ  ಯಾವುದು ಕೂಡ ಅಡೆ ತಡೆ ಆಗುವುದಿಲ್ಲ . ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾನತೆಯ ಮೂಲಕ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್ ,ಪ್ರತಿಷ್ಠಾ£ದ ಟ್ರಸ್ಟಿ ಇಬ್ರಾಹೀಂ ಕೋಟ, ಕಾರ್ಯದರ್ಶಿ ನರೇಂದ್ರ ಕೋಟ , ಕರ್ನಾಟಕ ಹಜ್ ಸಮಿತಿ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಕೋಟತಟ್ಟು ಗ್ರಾಪಂ ನೋಡೆಲ್ ಅಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಸದಸ್ಯ ಶೇಖ್ ಆಸಿಫ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಮಮ್ತಾಜ್ ,ಡಾ.ವಾರಿಜಾ ಎನ್,ಸುಶೀಲಾ ಸೋಮಶೇಖರ್ ,ಡಾ.ಫಿರ್ದೋಸ್, ಡಾ.ಅಪ್ಸರಿ ಭಾನು, ಮೀನಾ ಪಿಂಟೋ ಕಲ್ಯಾಣಪುರ, ಫರ್ಝಾನ ಎಂ, ಲಲಿತಾ ಪೂಜಾರಿ ಕೊರªಡಿ, ಸಿಜಾತ ಅಂದ್ರಾದೆ. ಶೈಲಾ ಎಸ್ ಪೂಜಾರಿ, ಮಂಜುಶ್ರೀ ರಾಕೇಶ್ ಕಟಪಾಡಿ ಅವರನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಸನ್ಮಾನಿಸಿದರು.  ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ  ಪ್ರಾಸ್ತಾವಿಕವಾಗಿ ಮಾತನಾಡಿದÀರು. ಅಕಾಡೆಮಿ ಸದಸ್ಯ  ನಝೀರ್  ಪೊಲ್ಯ ವಂದಿಸಿದರು. ಅಕಾಡೆಮಿ ಸದಸ್ಯರಾದ ಚಂಚಲಾಕ್ಷಿ ,ಶಂಶೀರ್ ಬುಡೋಳಿ, ಸುರೇಖಾ ಉಪಸ್ಥಿತರಿದ್ದರು. ಅನುóಷಾ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರಿಗಾಗಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಮೆಹಂದಿ  ಸ್ಪರ್ಧೆ ಮತ್ತು ಸಂಗೀತ  ಕುರ್ಚಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಸಾಬರಕಟ್ಟೆ ಅಕ್ಷರ ಪ್ರತಿಷ್ಠಾನ ತಂಡದಿಂದ ಸಾಂಸ್ಕøತಿಕ ಸಿಂಚನ ಕಾರ್ಯಕ್ರಮ ನಡೆಯಿತು.
 2. ಉಳ್ಳಾಲ ಪ್ರಥಮ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ: ಭಾಷೆ ಸಂಸ್ಕøತಿಯ ಉಳಿವಿನಲ್ಲಿ ಸಾಹಿತ್ಯ ಸಂಘಟನೆಗಳ ಪಾತ್ರ ಮಹತ್ವವಾಗಿದ್ದು, ಬ್ಯಾರಿ ಸಾಂಸ್ಕøತಿಕ ಅಂಗವಾಗಿರುವ ದಪ್ ಮೂಲಕ ಬ್ಯಾರಿ ಸಾಹಿತ್ಯ ಮತ್ತು  ಸಾಂಸ್ಕøತಿಕ ಸಮ್ಮೇಳನ ಉದ್ಘಾಟಿಸಲು ಅವಕಾಶ ನೀಡಿದ್ದು ತುಂಬಾ ಸಂತೋಷ ತಂದಿದೆ. ದಫ್ ನಮ್ಮ ಸಂಸ್ಕøತಿ ಆಗಿದ್ದು ಹಲವು ವರ್ಷಗಳ ಕಾಲ ದಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವ ಇಂದು ಮರುಕಳಿಸಿದೆ ಎಂದು ಪದ್ಮಶ್ರೀ ಪುರಸ್ಕøತ ಕರೆಕಳ ಹಾಜಬ್ಬ ಹೇಳಿದರು. ಅವರು ಉಳ್ಳಾಲ ಸಯ್ಯದ್ ವiದನಿ ಶಾಲೆಯಲ್ಲಿ ದಿನಾಂಕ: 27-03-2021ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೇಲ್ತೆನೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮ್ಮೇಳನವನ್ನು ದಫ್ ಮೂಲಕ ಉದ್ಘಾಟಿಸಿ ಮಾತನಾಡಿದರು.

        ಲಿಪಿ ಕಂಡು ಹಿಡಿಯುವುದು ಸ್ವಾಗತಾರ್ಹ:   ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆಲಿಕುಂಞ ಪಾರೆ ಮಾತನಾಡಿ ,ಬ್ಯಾರಿ ಭಾಷೆ ಪ್ರೀತಿ ಸಹೋದರತೆಯನ್ನು ಬೆಳೆಸಲು ಮಹತ್ವದ ಪಾತ್ರ ವಹಿಸುತ್ತದೆ. ಈ ಭಾಷೆಗೆ 140 ವರ್ಷಗಳ ಹಿಂದೆ ಖಾಝಿ ತಲಪಾಡಿ ಬಾಪಕುಂಞ ಮುಸ್ಲಿಯಾರ್ ಮುನ್ನುಡಿ ಬರೆದಿದ್ದರು. ಈಗ ಈ ಭಾಷೆಗೆ ಲಿಪಿ ಕಂಡು ಹಿಡಿಯುವುದು ಸ್ವಾಗತಾರ್ಹ. ಲಿಪಿ ಭಾಷೆಗೆ ಶ್ರೀಮಂತಿಕೆ ತಂದು ಕೊಡುತ್ತದೆ. ರಾಜ್ಯದ ಲಿಂಗಾಯುತ, ಒಕ್ಕಲಿಗ ಜಾತಿಗಳಿಗೆ ಸರಕಾರ ಪ್ರತ್ಯೇಕ ನಿಗಮ, ಪ್ರಾಧಿಕಾರ ರಚಿಸಿದಂತೆ 20 ಲಕ್ಷದಷ್ಟಿರುವ ಬ್ಯಾರಿ ಅಭಿವೃದ್ಧಿಗೂ ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ  ಅಬ್ಬಾಸ್ ಉಚ್ಚಿಲ ಬೆಲ್ಕಿರಿ ಪುಸ್ತಕ ಲೋಕಾರ್ಪಣೆ ಮಾಡಿದರು.

         ವಿಚಾರಗೋಷ್ಠಿ : ವಿವಿಧ ವಿಚಾರಗಳ ಮಂಡನೆ :ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೇಲ್ತನೆ ಇದರ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಸೆಯ್ಯದ್ ಮದನಿ ಶಾಲೆಯಲ್ಲಿ ಶನಿವಾರ ನಡೆದ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮ್ಮೇಳನದ ಪ್ರಯುಕ್ತ ವಿಚಾರಗೋಷ್ಠಿ ನಡೆಯಿತು. ಮದನಿ ಪಿ.ಯು ಕಾಲೇಜು ಪ್ರಾಂಶುಪಾಲ ಇಸ್ಮಾಯಿಲ್ ಟಿ. ಶಿಕ್ಷಣ ಮತ್ತು ಬ್ಯಾರಿ ಮಕ್ಕಳು, ಸ್ನೇಹ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಅಶಿರುದ್ದೀನ್ ಸಾಮಾಜಿಕ ಜಾಲತಾಣ ಮತ್ತು ಬ್ಯಾರಿಗಳು, ಬಬ್ಬುಕಟ್ಟೆ ಹಿರಾ ವಿಮೆನ್ಸ್ ಕಾಲೇಜು ಉಪನ್ಯಾಸಕಿ ರುಕ್ಸಾನ ಉಮ್ಮರ್ ಕೊರೋನಾ ಕಾಲದ ಕುಟುಂಬ ಸಂಬಂಧ, ಲೇಖಕಿ ಮುನೀರಾ ತೊಕ್ಕೊಟ್ಟು ಮಹಿಳೆ ಮತ್ತು ಕೆಲಸ ಕಾರ್ಯ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮದ ಪ್ರಯುಕ್ತ ಕವಿಗೋಷ್ಠಿ ಮೆಹಂದಿ, ಅಡುಗೆ, ಭಾಷಣ ಸ್ಫರ್ಧೆ ನಡೆಯಿತು. ಕವಿಗೋಷ್ಠಿಯಲ್ಲಿ ನಾಸೀರ್ ಸಜೀಪ, ಹಮೀದ್ ಹಸನ್ ಮಾಡೂರು, ರಫೀಕ್ ಕಲ್ಕಟ್ಟ, ಶ ಅದ್ ಸಜೀಪ ನಡು, ನಿಜಾಂ ಗೋಳಿಪಡ್ಪು, ಮುತ್ತಲಿಬ್ ಕಿನ್ಯ, ಶಮೀಮ ಕುತ್ತಾರ್, ಶಿಹಾನ, ಶಿಫಾ ಕೆ. ಉಳ್ಳಾಲ, ರೈಹಾನ, ಸಾರಾ ಮುಸ್ಕುರುನ್ನಿಸಾ ಭಾಗವಹಿಸಿದ್ದರು. ಬಶೀರ್ ಅಹ್ಮದ್ ಕಿನ್ಯ ಅವರ ನೇತೃತ್ವದಲ್ಲಿ ಬ್ಯಾರಿ ಹಾಡು ಕಾರ್ಯಕ್ರಮ ನಡೆಯಿತು. ಮೆಹಂದಿ, ಅಡುಗೆ, ಭಾಷಣ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ  ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎಂ ಮುನೀರ್ ಬಾವ, ನಗರ ಸಭೆ ಕೌನ್ಸಿಲರ್ ಅಸ್ಗರ್ ಅಲಿ, ಇಸ್ಮಾಯಿಲ್ ಯು.ಎ, ಮದನಿ ವಿದ್ಯಾ ಸಂಸ್ಥೆ ಪ್ರಿನ್ಸಿಪಾಲ್ ಇಸ್ಮಾಯಿಲ್, ಉಪಾಧ್ಯಕ್ಷ ಯು.ಕೆ ಇಬ್ರಾಹಿಂ, ಮದನಿ ಶಾಲೆಯ ಮುಖ್ಯೋಪಾಧ್ಯಾಯ ದೇವಪ್ಪ ಶೆಟ್ಟಿ ಮೇಲ್ತನೆ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ, ಅನ್ವರ್ ಸಾದತ್, ಅಶೀರುದ್ದೀನ್ ಸಾರ್ತಬೈಲ್, ಬಶೀರ್ ಕಲ್ಕಟ್ಟ, ರಿಯಾಝ್ ಮಂಗಳೂರು, ಬಶೀರ್ ಅಹ್ಮದ್ ಕಿನ್ಯ, ರಫೀಕ್ ಕಲ್ಕಟ್ಟ, ಮುಹಮ್ಮದ್ ಭಾಷಾ ನಾಟೆಕಲ್, ಮುತ್ತಲಿಬ್ ಕಿನ್ಯ ಉಪಸ್ಥಿತರಿದ್ದರು.

 22.ಬ್ಯಾರಿ ಜಾನಪದ ಕಲೆಗಳ ಸರ್ಟಿಫಿಕೆಟ್ ಕೋರ್ಸ್ ತರಬೇತಿಗೆ ಚಾಲನೆ ; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ ) ಇದರ ಸಹಕಾರದಲ್ಲಿ “ಬ್ಯಾರಿ ದಫ್ ,ಕೋಲ್ಕಲಿ, ಒಪ್ಪನೆ ಪಾಟ್ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ದಿನಾಂಕ:10-04-2021ರಂದು  ಕಾಲೇಜಿನ ಮಾಫೇಯಿ ಸೆಂಟರ್ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು , ಬ್ಯಾರಿ ಸಾಹಿತ್ಯ ಅಕಾಡೆಮಿಯು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನಾವು ಉತ್ತಮವಾಗಿ ಕೆಲಸವನ್ನು ಮಾಡಿದರೆ ಅದಕ್ಕಿಂತ ದೊಡ್ಡ ತೃಪ್ತಿ ಯಾವುದೂ ಇಲ್ಲ ಎಂದರು. ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವ ಪಡೀಲ್ , ಕಾರ್ನಾಡ್ ಮುಲ್ಕಿಯ ದಫ್ ಉಸ್ತಾದ್ ಕೆ,ಎಚ್.ರ್ನೂರ್ ಮುಹಮ್ಮದ್ ,ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಸರ್ಫರಾಝ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರಹೀಸ್ ಟಿ.ಕಣ್ಣೂರು ಭಾಗವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಶಂಶೀರ್ ಬುಡೋಳಿ ,ಸಂಯೋಜಕಿ ಪ್ರೊ.ಕ್ಯಾಸ್ತಲಿನೋ, ವಿದ್ಯಾರ್ಥಿ ಸಂಯೋಜಕ ಚೆಲ್ಸಿಯಾ ಡಿಸೋಜ , ಅಕಾಡೆಮಿಯ ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಉಪಸ್ಥಿತರಿದ್ದರು. ವಿಲ್ಸನ್ ಡಿಸೋಜ ವಂದಿಸಿದರು. ಶರಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

23.ಬ್ಯಾರಿ ಸಾಂಸ್ಕ್ರತಿಕ ಲೋಕದ ದಿಗಜ್ಜರಾದ ದಿವಂಗತ ಇಬ್ರಾಹಿಂ ತಣ್ಣೀರುಬಾವಿ ಸ್ಮರಣಾರ್ಥ “ ಬ್ಯಾರಿ ಅರ್ಚೊ ಮಸಾಲೆ 2021” ಬ್ಯಾರಿ ಸಂಗೀತ ಕಾರ್ಯಕ್ರಮ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ:20.6.2021 ರ ಆದಿತ್ಯವಾರದಂದು ರಾತ್ರಿ ಗಂಟೆ 7.00 ರಿಂದ 10.00 ರವರೆಗೆ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಲೋಕದ ದಿಗ್ಗಜರಾದ ದಿವಂಗತ ಇಬ್ರಾಹಿಂ ತಣ್ಣೀರುಬಾವಿ ಇವರ ನೆನಪಿಗಾಗಿ “ಬ್ಯಾರಿ ಅರ್ಚೊ ಮಸಾಲೆ 2021 “ಬ್ಯಾರಿ ಸಂಗೀತ ಲೈವ್ ಕಾರ್ಯಕ್ರಮವನ್ನು ಅಕಾಡೆಮಿಯ ಯುಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಮುಖಾಂತರ ಪ್ರಸಾರ ಮಾಡಲಾಗಿದೆ. ಬ್ಯಾರಿ ಭಾಷೆಯ ಪ್ರಸಿದ್ಧ ಗಾಯಕರಾದ ಅನಿತಾ ಡಿ.ಸೋಜಾ,ಮುಹಮ್ಮದ್ ಇಕ್ಬಾಲ್ ,ಹುಸೈನ್ ಕಾಟಿಪಳ್ಳ, ಅಶ್ರಫ್ ಅಪೋಲೋ, ಶರೀಫ್ ಪರ್ಲಿಯಾ, ಮತ್ತು ಫೈಝ್ ಕಾಟಿಪಳ್ಳ ಇವರು ಬಾಗವಹಿಸಿದ್ದಾರೆ. ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಸಂಗೀತ ಪ್ರಿಯರು ಬಯಸುತ್ತಿದ್ದು, ಈ ಬಗ್ಗೆ ನಿರಂತರವಾಗಿ ಬೇಡಿಕೆಗಳು ಇದ್ದ ಪರಿಣಾಮ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರು ತಿಳಿಸಿದ್ದಾರೆ. ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ಇವರು ಕಾರ್ಯನಿರ್ವಹಿಸಿದ್ದಾರೆ. ಪ್ರತಿಯೊಬ್ಬರು ಈ ಕಾರ್ಯಕ್ರಮವನ್ನು ಮನೆಯಲ್ಲಿ ಕುಳಿತು ವೀಕ್ಷಿಸಬೇಕಾಗಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾರವರು ತಿಳಿಸಿದರು.

24.ರೋಮನ್ ಲಿಪಿಯೊಂದಿಗೆ ಬ್ಯಾರಿ ಲಿಪ್ಯಂತರಣದ ತಂತ್ರಜ್ಞಾ£ ಬಿಡುಗಡೆ: ಬ್ಯಾರಿ ಭಾಷೆಯ ನೂತನ ಲಿಪಿಯನ್ನು ರೋಮನ್ ಲಿಪಿಯೊಂದಿಗೆ ಲಿಪ್ಯಂತರಣ ಮಾಡುವ ತಂತ್ರಜ್ಞಾನದ ಬಿಡುಗಡೆ ಕಾರ್ಯಕ್ರಮ ಬುಧವಾರ ದಿನಾಂಕ: 07-07-2021ರಂದು ಬ್ಯಾರಿ ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು. ಲಿಪ್ಯಂತರ ತಂತ್ರಜ್ಞಾ£ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಬ್ಯಾರಿ ಭಾಷೆಗೆ ಲಿಪಿ ಇಲ್ಲ ಎಂಬ ಕೊರಗನ್ನು 10 ತಿಂಗಳ ಹಿಂದೆ 11 ಮಂದಿಯ ತಂಡವು ಅಕಾಡೆಮಿಯ ನಿರ್ದೇಶನದಂತೆ ಲಿಪಿಯ ಸಂಶೋಧನೆ, ರಚನೆ ಮತ್ತು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಕಲಿಕಾವಿಧಾನದ ಭಾಗವಾಗಿ ಸ್ವರಾಕ್ಷರ, ವ್ಯಂಜನಾಕ್ಷರ, ಒತ್ತಕ್ಷರಗಳು ಮತ್ತು ಸಂಖ್ಯೆಗಳನ್ನು ಹೊಂದಿರುವ ಸಿ.ಡಿಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಅಂದರೆ ಮೊಬೈಲ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನಕ್ಕೆ ಗೂಗಲ್ ಸಹಿತ ಎಲ್ಲಾ ಬ್ರೌಸರ್‍ಗಳ ಮುಖಾಂತರ ಹೊಂದಿಕೊಳ್ಳುವ ರೀತಿಯಲ್ಲಿ ಬ್ಯಾರಿ ಲಿಪಿಯನ್ನು ರೋಮನ್ ಲಿಪಿಯೊಂದಿಗೆ ಅಂರ್ತಜಾ¯ದಲ್ಲಿ ಲಿಪ್ಯಂತgಣÀ ಮಾಡುವ ಯೋಜನೆಯನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು. ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಯು.ಟಿ.ಮುಹಮ್ಮದ್ ಮಶ್ಫೂಕ್ ಹುಸೈನ್ ,ಕೆ.ಎ ಮಿಸ್ಬಾಹುಲ್ ಶಫೀಕ್, ಮೆಲ್‍ರಾಯ್ ಪಿಂಟೋ ಲಿಪ್ಯಂತರಣ ವ್ಯವಸ್ಥೆಯನ್ನು ಸಿದ್ದಪಡಿಸಿದ್ದಾರೆ. ಬ್ಯಾರಿ ಲಿಪಿಯನ್ನು ಈ ಹೊಸ ತಂತ್ರಜ್ಞಾನದ ಮೂಲಕ ಟೈಪ್ ಮಾಡುವಾಗ ಸುಮಾರು 80 ರಷ್ಟು ಪದಗಳು ಯುನಿಕೋಡ್ ಇಲ್ಲದೆ ಬಳಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಯುನಿಕೋಡ್ ದೊರಕಿದ ಬಳಿಕ ಶೇ.100 ರಷ್ಟು ಬ್ಯಾರಿ ಲಿಪಿಯನ್ನು ಅಂರ್ತಜಾಲದಲ್ಲಿ ಬಳಕೆಯಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಈ ಸಂದರ್ಭ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಲಿಪಿ ಸಂಶೋಧನಾ ಸಮಿತಿಯ ಸದಸ್ಯರಾದ ಡಾ.ಅಬೂಬಕರ್ ಸಿದ್ದೀಕ್ ,ಹೈದರಾಲಿ ಕೆ,ಅಬ್ದುರ್ರಹ್ಮಾನ್ ಕುತ್ತೆತ್ತೂರು, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಅಲ್ವಿನ್ ಡೇಸಾ,ವಿದ್ಯಾರ್ಥಿಗಳಾದ ಯು.ಟಿ. ಮುಹಮ್ಮದ್ ಮಶ್ಫೂಕ್ ಹುಸೈನ್ , ಕೆ.ಇ ಇಸ್ಮಾಯಿಲ್ ಶಫೀಕ್, ಮೆಲ್ ರಾಯ್ ಪಿಂಟೋ ಉಪಸ್ಥಿತರಿದ್ದರು.

 1. ಬ್ಯಾರಿ ಜಾನಪದ ಕಲೆಗಳ ಕೋರ್ಸ್ : ತರಬೇತಿ ಪ್ರಮಾಣ ಪತ್ರಗಳ ವಿತರಣೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ)ಆಶ್ರಯದಲ್ಲಿ ದಿನಾಂಕ: 24-07-2021 ರಂದು ಬ್ಯಾರಿ ಜಾನಪದ ಕಲೆಗಳ ಕೋರ್ಸ್ ನ ತರಬೇತಿ ಪ್ರಮಾಣ ಪತ್ರ ವಿತರಣೆ ಮತ್ತು ಪ್ರತಿಭಾ ಪ್ರದರ್ಶನ ಕಾಲೇಜಿನ ಎರಿಕ್ ಮಥಾಯಿಸ್ ಸಭಣಾಂಗಣದಲ್ಲಿ ಶನಿವಾರ ನೆರವೇರಿತು. ದಫ್,ಕೋಲ್ಕಲಿ ಬಾರಿಸುವ ಮೂಲಕ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ರಾ ಪ್ರವೀಣ್ ಮಾರ್ಟಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ ಅಲೋಶಿಯಸ್ ಕಾಲೇಜು ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕøತಿಯ ಬೆಳವಣಿಗೆಗೆ ಬೆಂಬಲ ನೀಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಬ್ಯಾರಿ ಜಾನ¥ದ ಕಲೆಗಳ ಸರ್ಟಿಫಿಕೇಟ್ ಕೋಸ್ ್ ಆರಂಭಿಸಲಾಗಿದೆ ಎಂದರು. ಸಾಹಿತಿ ,ಪತ್ರಕರ್ತ ಹಂಝ ಮಲಾರ್ ಬ್ಯಾರಿ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋಸ್ ್ ಪೂರ್ಣಗೋಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.ಡಾ.ಸಿದ್ದಿಕ್ ವಗ್ಗ, ಸಾಮಾಜಿಕ ಧುರೀಣ ಹಸನ ಮಹಮ್ಮದ್, ತರಬೇತುದಾರರ ರಾಯಿಸ್ ಕಣ್ಣೂರು,ದಫ್ ಉಸ್ತಾದ್ ನೂರ್ ಅಹ್ಮದ್ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬ್ಯಾರಿ ಲಿಪಿಯನ್ನು ಗೂಗಲ್ ಹಾಗೂ ಇತರ ಬ್ರೌಸರ್ ಗಳ ಮೂಲಕ ಜಾಲತಾಣದಲ್ಲಿ ಇಂಗ್ಲೀಷ್ ಭಾಷೆಗೆ ಲಿಪ್ಯಂತರ ಮಾಡಿದ ಅಲೋಶಿಯಸ್ ಕಾಲೇಜಿನ ವಿದ್ಯಾಥಿಗಳಾದ ಮೊಹಮ್ಮದ್ ಮಶ್ಪೂಕ್ ಹುಸೈನ್, ಕೆ.ಇ ಇಸ್ಮಾಯಿಲ್ ಶಫೀಕ್ ಮತ್ತು ಮೆರ್ಲಾಯ್ ಪಿಂಟೊ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕೋರ್ಸ್ ಸಂಯೋಜಕಿ ಫ್ಲೋರಾ ಕ್ಯಾಸ್ತಲಿನೋ , ಸದಸ್ಯ ಸಂಚಾಲಕ ಕಮರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.  ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಶಂಶಿರ್ ಬುಡೋಳಿ ವಂದಿಸಿದರು. ಬಳಿಕ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ ವಿದ್ಯಾಥಿಗಳಿಂದ ಪ್ರತಿಭಾ ಪ್ರದರ್ಶನಾ ನಡೆಯಿತು.ಬ್ಯಾರಿ ದಫ್ ,ಕೋಲ್ಕಲಿ , ಒಪ್ಪನೆ ಪಾಟ್ ,ಕೈಕೊಟ್ ಪಾಟ್‍ಕುಣಿತಗಳ ತರಬೇತಿಯನ್ನು ಕೋರ್ಸ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ.
 2. ಬ್ಯಾರಿ ಕವಿಗೋಷ್ಠಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 2021 ಆಗಸ್ಟ್ 1 ರಂದು ಸಂಜೆ 7.30 ಕ್ಕೆ ಸಾಹಿತಿ ಮರ್ಹೂಂ ಬಿ.ಎಂ.ಇಚ್ಲಂಗೋಡು ಅವರ ನೆನಪಿಗಾಗಿ “ಬ್ಯಾರಿ ಕವಿಗೋಷ್ಠಿ” ಕಾರ್ಯಕ್ರಮ ಆಯೋಜಿಸಲಾಗಿದೆ.ಇದು ಅಕಾಡೆಮಿಯ ಯುಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಮುಖಾಂತರ ನೇರ ಪ್ರಸಾರವಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಮುಹಮ್ಮದ್ ಬಡ್ಡೂರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಿದರು.
 3.  ಬ್ಯಾರಿ ಜಾನಪದ ಕಲೆಗಳ ತರಬೇತಿ ಕೋರ್ಸ್ ಉದ್ಘಾಟನೆ

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ತೋಡಾರಿನ ಆದರ್ಶ ಪದವಿ ಪೂರ್ವ ಕಾಲೇಜಿನ ಸಹಕಾರದಲ್ಲಿ ಆ. 15 ರಂದು ಬೆಳಿಗ್ಗೆ 9.30 ಕ್ಕೆ ಬ್ಯಾರಿ ಜಾನಪದ ಕಲೆಗಳ ತರಬೇತಿ ಕೋರ್ಸ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾಡಿದರು. ಕಾಲೇಜಿನ ಅಧ್ಯಕ್ಷ ಮುಹಮ್ಮದ್ ಆಸೀಪ್ ಅಧ್ಯಕ್ಷತೆ ವಹಿಸಿದರು.

  ಅಕಾಡೆಮಿಯ ಅಧ್ಯಕ್ಷ ಮಾತನಾಡಿ ಪ್ರತಿಯೊಬ್ಬ ಭಾರತೀಯರ ಕಣಕಣದಲ್ಲೂ ದೇಶಪ್ರೇಮವಿದೆ. ಪ್ರತಿಯೊಬ್ಬ ಭಾರತೀಯನೂ ದಿನಾಲೂ ಮನಸ್ಸಿನಲ್ಲಿ ದೇಶವನ್ನು ನೆನೆಯುತ್ತಾ ಗೌರವಸುತ್ತಾ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ ಎಂದರು.

  ಇದೇ ಸಮಯದಲ್ಲಿ ಯೋಧ ಝುಬೈರ್ ಹಳೆನೇರಂಕಿ ಮತ್ತು ಸಮಾಜ ಸೇವಕ ಝಾಕಿರ್ ಆರ್.ಎಸ್. ಸೂರಲ್ಪಾಡಿಯವರನ್ನು ಈ ಸಂಧರ್ಭ ಸನ್ಮಾನಿಸಲಾಯಿತು. ಬ್ಯಾರಿ ಅಕಾಡೆಮಿಯ ರಿಜಿಸ್ಟಾçರ್ ಪೂರ್ಣಿಮಾ ಸ್ವಾಗತಿಸಿ ,ಕನ್ನಡ ಪ್ರಾಧ್ಯಾಪಿಕೆ ಲತಾ ವಂದಿಸಿದರು. ಬ್ಯಾರಿ ಅಕಾಡೆಮಿ ಸದಸ್ಯ ಸಂಚಾಲಕ ಶಂಶಿರ್ ಬುಡೋಳಿ ನಿರೂಪಿಸಿದರು.

 4.     ಬ್ಯಾರಿ ಅಕಾಡೆಮಿ ವೆಬ್ ಸೈಟ್ ಅನಾವರಣ :

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಾಗಿ ಸರ್ಕಾರದಿಂದ ಅಧಿಕೃತವಾಗಿ ನೀಡಲ್ಪಟ್ಟ ವೆಬ್‌ಸೈಟನ್ನು ದಿನಾಂಕ: 14-09-2021 ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷ ರಹೀಂ ಉಚ್ಚಿಲ್ ಲೋಕಾÀರ್ಪಣೆಗೈದರು.

  ಅಕಾಡೆಮಿ ಪ್ರಾರಂಭವಾದ ಬಳಿಕ 2009 ರಿಂದ ಈ ತನಕ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಅಕಾಡೆಮಿ ವೆಬ್ ಸೈಟ್ ಹೊಂದಿತ್ತು. ಇದನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕಾಗಿತ್ತು. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರಕ್ಕೆ ಮನವಿ ಮಾಡಿದ ಮೇರೆಗೆ ನೂತನವಾಗಿ ವಿನ್ಯಾಸಗೊಂಡು ಏಕರೂಪತೆಯನ್ನು ಹೊಂದಿರುವ ವೆಬ್ ಸೈಟ್ ಉಚಿತವಾಗಿ ಲಭಿಸಿದೆ. ಇದನ್ನು ಅಕಾಡೆಮಿ ಸಿಬ್ಬಂದಿಯೇ ನಿರ್ವಹಿಸಬಹುದಾಗಿದೆ. ಇದರಿಂದಾಗಿ ಅಕಾಡೆಮಿಯ ದಿನನಿತ್ಯದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಕ್ಷಣ ವೆಬ್ ಸೈಟ್ ಲ್ಲಿ ಅಳವಡಿಸಬಹುದು. ಎಂದು ರಹೀಂ ಉಚ್ಚಿಲ್ ಹೇಳಿದರು. ಹಿರಿಯ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮುಖ್ಯ ಅತಿಥಿಯಾಗಿದ್ದರು.

  ಅಕಾಡೆಮಿ ನೂತನ ಸದಸ್ಯ ಸಾದತ್ ಶಿವಮೊಗ್ಗ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟಾರ್ ಪೂರ್ಣಿಮಾ ಸ್ವಾಗತಿಸಿದರು. ಶಂಶೀರ್ ಬುಡೋಳಿ ವಂದಿಸಿದರು.

 5.   ಮಂಗಳೂರಿನಲ್ಲಿ ಬ್ಯಾರಿ ಭಾಷಾ ದಿನಾಚರಣೆ 

  ಸಾವಿರಾರು ಮಂದಿಯ ಹೋರಾಟದ ಫಲವಾಗಿ ಬ್ಯಾರಿ ಅಕಾಡೆಮಿಯು ಸ್ಥಾಪನೆಗೊಂಡಿದೆ. ಆ ಹೋರಾಟಗಾರರ ಉದ್ದೇಶ ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇನೆ ಎಂದು ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 03-10-2021 ರಂದು ನಡೆದ ಬ್ಯಾರಿ ಭಾಷಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾನುವಾರ ನಡೆಯಿತು . ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆಗಿದೆ ತ್ರಪ್ತಿಯೂ ಇದೆ. ಇದೀಗ ಬ್ಯಾರಿ ಭಾಷೆ ಯುನಿಕೋಡ್ ಗೆ ಅಳವಡಿಸುವ  ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ನುಡಿದರು.

  ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಹಂಝ ಮಲಾರ್ ಬ್ಯಾರಿ ಭಾಷಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್ ಮಾತನಾಡಿದರು. ಸಂಯೋಜಕ ಡಾ.ಅಬೂಬಕ್ಕರ್ ಸಿದ್ದೀಕ್ ,ಸಲಹಾ ಸಮಿತಿಯ ಸದಸ್ಯರಾದ ಕಮರುದ್ದೀನ್ ಸಾಲ್ಮರ , ಚಂಚಲಾಕ್ಷಿ ,ಸುರೇಖಾ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಶಂಶಿರ್ ಬುಡೋಳಿ ನಿರೂಪಿಸಿದರು.

  ಸಾಧಕರಿಗೆ ಸನ್ಮಾನ

  ಬ್ಯಾರಿ ಭಾಷೆ, ಕಲೆ,ಸಾಹಿತ್ಯ ಮತ್ತು ಸಾಂಸ್ಕ್ರತಿಕ  ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮೌಲನಾ ಅಬ್ದುಲ್ ಅಝೀಝ್ ದಾರಿಮಿ (ಪ್ರವಚನ ಕಾರ), ಟಿ.ಎ ಆಲಿಯಬ್ಬ ಜೋಕಟ್ಟೆ (ಹಿರಿಯ ಬ್ಯಾರಿ ಸಾಹಿತಿ), ಅಬ್ದುಲ್ ಖಾದರ್ ಬುಟ್ಟೋ (ಭಾಷಾ ಸಂಘಟಕ), ಶಮೀರ್ ಮುಲ್ಕಿ (ಅಧ್ಯಕ್ಷರು, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ.ಕ ಮತ್ತು ಉಡುಪಿ ಜಿಲ್ಲೆ ),  ಸಮದ್ ಗಡಿಯಾರ್ (ಬ್ಯಾರಿ ಗಾಯಕ), ಅಶ್ರಫ್ ಸವಣೂರು (ಬ್ಯಾರಿ ಸಾಹಿತಿ) ,ಸತ್ತಾರ್ ಗೂಡಿನಬಳಿ(ಬ್ಯಾರಿ ನಾಟಕ ಕಲಾವಿದ ), ಜಿಯಾ ಕಲ್ಲಡ್ಕ( ಬ್ಯಾರಿ ಗಾಯಕ) ,ರಾಝ್ ಕಲಾಯಿ ಮತ್ತು ಇರ್ಫಾನ್ ಬಜಾಲ್ (ಬ್ಯಾರಿ ಸಾಹಿತ್ಯ)ಅವರನ್ನು ಸನ್ಮಾನಿಸಲಾಯಿತು.

  ಸ್ಫರ್ಧೆಗಳ ಬಹುಮಾನ ವಿತರಣೆ

  ಭಾಷಾ ದಿನಾಚರಣೆ ಪ್ರಯುಕ್ತ ನಡೆದ ಬ್ಯಾರಿ ಭಾಷಣ ಮತ್ತು ಆನ್ ಲೈನ್ ಮೂಲಕ ಏರ್ಪಡಿಸಲಾದ ಬ್ಯಾರಿ ಗಾಯನ ಹಾಗೂ ಬ್ಯಾರಿ ಪ್ರಬಂಧ ವಾಚನ ಸ್ಫರ್ಧೆಯ ವಿಜೇತರಿಗೆ  ಬಹುಮಾನ ವಿತರಿಸಲಾಯಿತು.

 6. ಕನ್ನಡ ರಾಜ್ಯೋತ್ಸವ ಆಚರಣೆ ನಿಮಿತ್ತ     ಚರ್ಚಾಗೋಷ್ಠಿ 30-10-2021

   ಕನ್ನಡ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಬ್ಯಾರಿ ಸಾಹಿತ್ಯಅಕಾಡೆಮಿ ವತಿಯಿಂದ ಚರ್ಚಾಗೋಷ್ಠಿ ಕಾರ್ಯಕ್ರಮವನ್ನು ಮಂಗಳೂರು ನಗರದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಮನ್ವಯಕಾರರಾದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಕನ್ನಡ ಭಾಷೆಗೆ ಬ್ಯಾರಿಗಳ ಕೊಡುಗೆಯ ಬಗ್ಗೆ ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ

  ಅಝೀಝ್ ಬೈಕಂಪಾಡಿ ಅಧ್ಯಕ್ಷರು ಬ್ಯಾರಿ ಕಲಾ ರಂಗ ಮಂಗಳೂರು, ಡಾ|ಅಬೂಬಕ್ಕರ್ ಸಿದ್ದೀಕ್ ಸಂಯೋಜಕರು ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿ.ವಿ ,ಎ.ಕೆ ಕುಕ್ಕಿಲ ಪತ್ರಕರ್ತರು ,ಮೌಶಿರ್ ಅಹ್ಮದ್ ಸಾಮಣಿಗೆ ಉಪಾಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ ,ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯಕರ್ತರು ಚರ್ಚಾಗೋಷ್ಠಿಯಲ್ಲಿ  ಪಾಲ್ಗೊಂಡರು. ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ವಂದಿಸಿದರು.

 7.  ಕನ್ನಡ ರಾಜ್ಯೋತ್ಸವ ಆಚರಣೆ ನಿಮಿತ್ತ  ಮಹಿಳಾ ಕವಿಗೋಷ್ಠಿ 31-10-2021

  ಕನ್ನಡ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವನ್ನು ಮಂಗಳೂರು ನಗರದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಬ್ಯಾರಿ ಸಾಹಿತ್ಯಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಕಾರ್ಯಕ್ರಮದ ಸವನ್ವಯಕಾರರು ಹಾಗೂ ಸಿಹಾನಾ ಬಿ.ಎಮ್ ಉಳ್ಳಾಲ ಇವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಯತ್ರಿಗಳಾಗಿ ರಹೀನಾ ತೊಕ್ಕೊಟ್ಟು, ಜುವೇರಿಯಾ ಮುಫೀದಾ, ಆಯೀಶಾ ಪೆರ್ನೆ,ರಶೀದಾ ಬಾನು ಇವರು ಭಾಗವಹಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಕಾರ್ಯಕ್ರಮ ವಂದಿಸಿದರು.

 8.   ಬ್ಯಾರಿ ಅಕಾಡೆಮಿಯಿಂದ  ಕನ್ನಡ ರಾಜ್ಯೋತ್ಸವ  01-11-2021

   ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಉಪನ್ಯಾಸ, ಸನ್ಮಾನ ಕಾರ್ಯಕ್ರಮ ,ಭಾಷಣ ಸ್ಫರ್ಧೆಯು ಮಂಗಳೂರು ನಗರದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ನಡೆಯಿತು.

  ತೆಂಗಿನ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕನ್ನಡ ದಿನದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಕರಾವಳಿ ಕನ್ನಡದ ಕಣ್ಮಣಿ , ನಾಟಕ, ಸಿನೆಮಾ , ಧಾರಾವಾಹಿ ಕಿರುತೆರೆ ಕಲಾವಿದ ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಗೆ ವಿಶೇಷ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಕನ್ನಡದಲ್ಲಿ ಸಾಧನೆಗೈದ ಐದು ಮಂದಿ ಬ್ಯಾರಿ ಭಾಷಿಕರಾದ ಕೆ.ಎಂ.ಸಿದ್ದೀಕ್ ಮೊಂಟುಗೋಳಿ , ಅಬೂಬಕ್ಕರ್  ಅನಿಲಕಟ್ಟೆ, ಹನೀಫ್ ಪುತ್ತೂರು, ಇಮ್ತಿಯಾಝ್ ಶಾ ತುಂಬೆ, ಸಮೀರಾ ಕಡಬ ಇವರನ್ನು ಸನ್ಮಾನಿಸಲಾಯಿತು. ಇನ್ನು ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಕನ್ನಡ ಭಾಷಣ ಸ್ಫರ್ಧೆಯಲ್ಲಿ ವಿಜೇತರಾದ 15 ಮಂದಿ ಕನ್ನಡ ಭಾಷಣ ಮಾಡಿದರು. ನವಾಝ್ ಕಡಂಬು, ಅಕ್ಬರ್ ಅಲಿ ಪೊನ್ನೊಡಿ, ಮುಹಮ್ಮದ್ ನಜೀಮ್, ಅಬ್ದುಲ್ ನಾಶೀರ್, ಬಾತೀಶ್ ತೆಕ್ಕಾರ್, ಮುಹಮ್ಮದ್ ನೌಷದ್ ಕತ್ತತಾರ್, ಶಿರಾಜುದ್ದೀನ್ ಗುರುವಾಯನಕೆರೆ, ಯಹ್ಯಾ ಬರಿಮಾರ್ ,ಮುನೀರಾ ಭಾಷಣ ಮಾಡಿದರು. ವಿಜೇತರಿಗೆ ಪ್ರಮಾಣ ಪತ್ರ, ಗೌರವಧನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸದಸ್ಯ ಬಶೀರ್ ಬೈಕಂಪಾಡಿ ,ಅಬ್ದುಲ್ ರಹ್ಮಾನ್ ಕುತ್ತೆತ್ತೂರು , ಹಸನಬ್ಬ, ಅನ್ಸಾರ್ ಬೆಳ್ಳಾರೆ ,ಸದಸ್ಯ  ರಾಧಾಕೃಷ್ಣ ನಾವಾಡ ಉಪಸ್ಥಿತರಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 9.   19-12-2021  ರಂದು ನಡೆದ ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್  2021-22

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಜಾನಪದ , ಕಲೆ , ಸಂಸ್ಕ್ರತಿ ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ಯಾರಿ ಸಾಂಸ್ಕ್ರತಿಕ ರಥದ ಮೂಲಕ ಏರ್ಪಡಿಸಲಾಗಿರುವ “ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್ 2021-2022 ಕಾರ್ಯಕ್ರಮವನ್ನು ರವಿವಾರ ಮಂಗಳೂರು ನಗರದ ತಾಲೂಕು ಪಂಚಾಯತ್ ನ ಹೊಸ ಕಟ್ಟಡದ ಎದುರು  ಉದ್ಘಾಟಿಸಲಾಯಿತು.  ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ , ಬ್ಯಾರಿ ಸಾಹಿತ್ಯಅಕಾಡೆಮಿಯು ಜನರ ಬಳಿಗೆ ಹೋಗಿ ಸೇವೆ ಮಾಡುತ್ತಿದೆ. ಎಂದರು. ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ನಿರೂಪಿಸಿದರು. ಮುಖ್ಯ  ಅತಿಥಿಯಾಗಿ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿ.ವಿ ಸಂಯೋಜಕ ಡಾ| ಅಬೂಬಕ್ಕರ್ ಸಿದ್ದಿಕ್ , ಸಾಮಾಜಿಕ ಕಾರ್ಯಕರ್ತ ಮುಸ್ತಫಾ ತಂಙಳ್ , ಖಾಲಿದ್ ನಂದಾವರ, ಜಯ ಭಂಡಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ  ಅಕಾಡೆಮಿಯ ಮಾಜಿ  ಸದಸ್ಯ ಹಸನಬ್ಬ ಮೂಡಬಿದಿರೆ, ಗಾಯಕ ಬಾತಿಶ್ ಪುತ್ತೂರು, ರಾಯಿಸ್ ಕಣ್ಣೂರು ಭಾಗವಹಿಸಿದ್ದರು. ತದ ನಂತರ ಬ್ಯಾರಿ ಸಾಂಸ್ಕ್ರತಿಕ ರಥವು ಮಂಗಳೂರು ನಗರದಿಂದ ಉಳ್ಳಾಲ ತಾಲೂಕಿನ ಕೋಟೆಪುರ , ಕೋಡಿ , ಪಟ್ಟಣ ಪಂಚಾಯತ್ ಕಚೇರಿ ಮುಂಭಾಗ , ಮುಕ್ಕಚೇರಿ , ಮಾಸ್ತಿಕಟ್ಟೆ , ಮೇಲಂಗಡಿ , ಹಳೆಕೋಟೆ , ಅಲೇಕಳ ,ಅಂಬೇಡ್ಕರ್ ಮೈದಾನ (ಒಳಪೇಟೆ ತೊಕ್ಕೊಟ್ಟು )ದಲ್ಲಿ ಸಂಚರಿಸಿತು.

 10.    3-1-2022  ತೊಕ್ಕೊಟ್ಟು : ಬ್ಯಾರಿ ಅಕಾಡೆಮಿಯ ನೂತನ ಕಚೇರಿಗೆ ಭೂಮಿ ಪೂಜೆ 

       ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿಯ ಭೂಮಿ ಪೂಜೆ ಕಾರ್ಯಕ್ರಮವು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಸೋಮವಾರ ನಡೆಯಿತು. ಕರ್ನಾಟಕ ಗ್ರಹ ಮಂಡಳಿ ವತಿಯಿಂದ ನಡೆಯುತ್ತಿರುವ ಕಾಮಗಾರಿಯ ಶಿಲಾನ್ಯಾಸವನ್ನು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ನೆರವೇರಿಸಿದರು.  ಬಳಿಕ ಮಾತನಾಡಿದ ಅವರು ತುಳು ,ಕೊಂಕಣಿ ,ಕೊಡವ,ಅರೆಭಾಷೆ  ಅಕಾಡೆಮಿಗಳಿಗೆ ಭವನಗಳನ್ನು ಸರಕಾರ ನೀಡಿದಂತೆ ಯಾವುದೇ ತಾರತಮ್ಯ ತೋರದೆ ಬ್ಯಾರಿ ಅಕಾಡೆಮಿಗೂ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿ 6 ಕೋ.ರೂ. ಬಿಡುಗಡೆ ಮಾಡಿತ್ತು. ಇದೀಗ ಶಿಲಾನ್ಯಾಸ ನಡೆದ ಅಣತಿ ದೂರದಲ್ಲಿ ಅಬ್ಬಕ್ಕ ಭವನ ನಿರ್ಮಾಣವಾಗಲಿರುವುದರಿಂದ ಎರಡು ಭವನ ಜೊತೆಯಾಗಿರುವುದು ಬೇಡ ಎಂದು ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಅವರ ಭಾವನೆಯನ್ನು ಗೌರವಿಸಿಕೊಂಡು ಭವನ ನಿರ್ಮಾಣದ ಉದ್ದೇಶವನ್ನು ಕೈ ಬಿಟ್ಟು  ಬಿಡುಗಡೆಯಾದ 6 ಕೋ.ರೂ. ಪೈಕಿ 3 ಕೋ. ರೂ ವೆಚ್ಚದಲ್ಲಿ ವಾಹನ ನಿಲುಗಡೆ ಹಾಗೂ ಒಂದನೇ ಮಹಡಿಯಲ್ಲಿ  ಅಕಾಡೆಮಿಗೆ ಸರಕಾರಿ ಕಚೇರಿಯನ್ನು ಮಾತ್ರ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿ ಹೊಸ ನಕ್ಷೆ ವಿನ್ಯಾಸಗೊಳಿಸಿ ಕಾಮಗಾರಿ ಆರಂಭಿಸಲು ಇಲಾಖೆಯ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿದೆ. ಎಂದರು.

  ಈ ಕಟ್ಟಡದಲ್ಲಿ 2 ಸಾವಿರ ಚ.ಅಡಿಯ ಪೆರ್ಮನ್ನೂರು ಗ್ರಾಮಣಿಕರಣಿಕರ ಮತ್ತು ಸರ್ವೇಯರ್ ಕಚೇರಿಯು ನಿರ್ಮಾಣವಾಗಲಿದೆ. ಎಂದು ರಹೀಂ ಉಚ್ಚಿಲ್ ತಿಳಿಸಿದರು. ತಿರುಮಲೇಶ್ ಭಟ್ ಭೂಮಿ ಪೂಜೆ ನೆರವೇರಿಸಿದರು. ಸೈಯದ್ ಮುಸ್ತಫ ತಂಙಳ್ ದುಆಗೈದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕರ್ನಾಟಕ ಗ್ರಹ ಮಂಡಳಿಯ ಇಂಜಿನಿಯರ್ ವಿಜಯ್ ಕುಮಾರ್ ವಂದಿಸಿದರು. ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

 11.  10-1-2022  ಮಡಿಕೇರಿ : ಬ್ಯಾರಿ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ  ಉತ್ತರ ಕನ್ನಡದಲ್ಲಿ ಬ್ಯಾರಿ ಕಾರ್ಯಕ್ರಮಗಳು ಆಯೋಜನೆಯಾಗಲಿ:ವಿಧಾನ ಪರಿಷತ್ತ್ ಸಭಾಪತಿ ಬಸವರಾಜ ಹೊರಟ್ಟಿ

   ನಾಡು ,ನುಡಿ ಹಾಗೂ ನೀರಿನ ವಿಚಾರದಲ್ಲಿ ಒಂದಾಗಬೇಕು ಎಂದು ವಿಧಾನ ಪರಿಷತ್ತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2021 ನೇ ಗೌರವ ಪ್ರಶಸ್ತಿ ಪ್ರದಾನ  ಮಾಡಿ ಅವರು ಸೋಮವಾರ ಮಾತನಾಡಿದರು. ಅಲ್ಪಸಂಖ್ಯಾತ ಸಮುದಾಯದ ಸಾಹಿತ್ಯವನ್ನು ಬೆಳೆಸಲು ಸರ್ಕಾರಗಳು ಆಸಕ್ತಿ ತೋರಿಸಬೇಕಾದ್ದು, ಆಯಾ ಸರ್ಕಾರಗಳ ಕರ್ತವ್ಯ ಹಾಗೂ ಜವಾಬ್ದಾರಿ  ಎಂದು ಹೇಳಿದರು.

  ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಕ್ಷೇತ್ರದ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಪ್ರದಾನ ಮಾಡುತ್ತವೆ. ಸರ್ಕಾರ ಸಮುದ್ರವಿದ್ದಂತೆ , ಕೆಲವೊಮ್ಮೆ ಎಲೆಮರೆಕಾಯಿಯಂತೆ ಇರುವ ಪ್ರತಿಭೆಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅಕಾಡೆಮಿಗಳು ಹಾಗೂ ಸಂಘ ಸಂಸ್ಥೆಗಳು ಅರ್ಹರನ್ನು ಹುಡುಕಿ ಪ್ರಶಸ್ತಿ ಪ್ರದಾನ ಮಾಡಬೇಕು ಎಂದರು.

  ಬ್ಯಾರಿ ಭಾಷಿಕರಲ್ಲಿ ಕನ್ನಡದ ಮೇಲಿನ ಪ್ರೀತಿ ಗಮನಿಸಿದರೆ ಹೆಮ್ಮೆ ಎನಿಸಲಿದೆ. ಒಮ್ಮೆ  ಕಾಸರಗೋಡಿನ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಯೂ ಅವರ ಕನ್ನಡ ಬಳಕೆ ನೋಡಿ ಖುಸಿಪಟ್ಟೆ ಎಂದು ತಿಳಿಸಿದರು. ಬ್ಯಾರಿ ಅಕಾಡೆಮಿಯ ಕಾರ್ಯಕ್ರಮಗಳು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ನಡೆಯಬೇಕು. ಆಗ ಸಾಂಸ್ಕ್ರತಿಕವಾಗಿ  ಅಲ್ಲಿನ ಜನರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಣ ಬಲ , ತೋಳ್ಬಲ ಹಾಗೂ ರಾಜಕೀಯ ಪ್ರಭಾವ ಉಳ್ಳವರಿಗೆ ಮಾತ್ರ ಪದ್ಮಶ್ರೀ ಗೌರವ ಸಿಗುತ್ತದೆ. ಎಂದು ಭಾವಿಸಿದ್ದೆ.  ಆದರೆ , ಈಚೆಗೆ ಚಾರಿತ್ರಿಕ ಬದಲಾವಣೆಗಳು ಆಗಿವೆ. ಕಿತ್ತಳೆ ಹಣ್ಣು ಮಾರಾಟ ಮಾಡಿ, ಶಾಲೆ ಕಟ್ಟಿದ  ಹರೇಕಳ ಹಾಜಬ್ಬ ಅವರಂತಹ ಸಾಧಕರಿಗೆ ಈ  ಗೌರವ ಸಿಗುವ  ಮಟ್ಟಿಗೆ ಬದಲಾವಣೆ  ಆಗಿದೆ. ಸಮಾಜದಲ್ಲಿ ಒಬ್ಬ ಕಟ್ಟಕಡೆಯ ವ್ಯಕ್ತಿಯೂ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಬಹುದು. ಎಂಬುದನ್ನು ಹಾಜಬ್ಬ ತೋರಿಸಿಕೊಟ್ಟಿದ್ದಾರೆ. ಎಂದು ಶ್ಲಾಘಿಸಿದರು. ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ , ಕೋವಿಡ್ ಕಾಲಘಟ್ಟದಲ್ಲಿ ಸಂಕಷ್ಟದಲ್ಲಿದ್ದ  ಕಲಾವಿದರಿಗೆ  9 ಲಕ್ಷ  ವೆಚ್ಚದಲ್ಲಿ  400 ರಷ್ಟು ಆಹಾರ ಕಿಟ್  ವಿತರಣೆ ಮಾಡಲಾಯಿತು ಎಂದರು. ಅಕಾಡೆಮಿಗೆ ಸ್ವಂತ ಕಟ್ಟಡ ಇರಲಿಲ್ಲ ತೊಕ್ಕೊಟ್ಟು  ಎಂಬಲ್ಲಿ ಸರ್ಕಾರವು ನಿವೇಶನ ಒದಗಿಸಿದ್ದು,  6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಎಂದು ಮಾಹಿತಿ ನೀಡಿದರು. ಬೇರೆ ಬೇರೆ ಅಕಾಡೆಮಿಗಳ ವಿಶ್ವ ಸಮ್ಮೇಳನಗಳು ನಡೆದಿವೆ. ಆದರೆ, ಬ್ಯಾರಿ ಅಕಾಡೆಮಿಯಿಂದ  ವಿಶ್ವ ಸಮ್ಮೇಳನ ಆಗಿಲ್ಲ. ಮುಂದಿನ ಈ ಸಮ್ಮೇಳನ ನಡೆಸಿ ಬ್ಯಾರಿ ಸಾಹಿತ್ಯ ಹಾಗೂ ಸಂಸ್ಕ್ರತಿ ಪರಿಚಯಿಸುವ ಕೆಲಸ ಮಾಡಲಾಗುವುದು. ಎಂದು ಹೇಳಿದರು.

  2021 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಹರೇಕಳ ಹಾಜಬ್ಬ (ಬ್ಯಾರಿ ಭಾಷೆ ಹಾಗೂ ಶಿಕ್ಷಣ ), ಹುಸೈನ್ ಕಾಟಿಪಳ್ಳ (ಬ್ಯಾರಿ ಕಲೆ ಮತ್ತು ಸಾಹಿತ್ಯ) , ಡಾ. ಸಿದ್ದೀಕ್ ಅಡ್ಡೂರು ( ಸಮಾಜ ಸೇವೆ) , ಅಶ್ರಫ್ ಅಪೋಲೋ (ಬ್ಯಾರಿ ಸಂಗೀತ), ಡಾ.ಕೆ.ಎ ಮುನೀರ್ ಬಾವ (ಸಮಾಜ ಸೇವೆ) , ಮರಿಯಮ್ ಫೌಝಿಯಾ ಬಿ.ಎಸ್.(ಮಹಿಳಾ ಸಾಧಕಿ) ,ಬ್ಯಾರಿ ಝುಲ್ಫಿ (ಯುವ ಪ್ರತಿಭೆ) ,ಮೊಹಮ್ಮದ್ ಬಶೀರ್ ಉಸ್ತಾದ್ (ಬ್ಯಾರಿ ದಫ್), ಮೊಹಮ್ಮದ್ ಫರಾಝ್ ಅಲಿ( ಬಾಲ ಪ್ರತಿಭೆ) ಅವರಿಗೆ ಪ್ರದಾನ ಮಾಡಲಾಯಿತು.

   ಸೈಯದ್ ಹಸನ್ ಆಟಕೋಯ ತಂಙಳ್ ಅಸ್ಸಖಾಫ್, ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಲಕ್ಷ್ಮೀ ನಾರಾಯಣ ಕಜೆಗದ್ದೆ, ಬ್ಯಾರಿ ವೆಲ್ಫೇರ್ ಟ್ರಸ್ಟ್ ಎಸ್.ಐ. ಮುನೀರ್ ಅಹಮದ್, ಚಿತ್ರ ನಟಿ ಪ್ರಾಚಿ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೇಶವಕಾಮತ್ ರಿಜಿಸ್ಟ್ರಾರ್ ಪೂರ್ಣಿಮಾ ಹಾಜರಿದ್ದರು.

 12.    ದಿನಾಂಕ 11-02-2022 : ಹತ್ತು ಮಹನೀಯರ ಹತ್ತು ಕೃತಿ ಬಿಡುಗಡೆ ಮತ್ತು ದಿ.ಅಹ್ಮದ್ ನೂರಿ ಜನ್ಮಶತಮಾನೋತ್ಸವ ಆಚರಣೆ: ಪುರಭವನ ಮಂಗಳೂರು

  ಬ್ಯಾರಿ ಭಾಷಿಕರ ಕುರಿತು ಮೈಕಾಲ ಎಂಬ ಕ್ರತಿಯನ್ನು ರಚನೆ ಮಾಡುವ ಮೂಲಕ ಪ್ರಸಿದ್ಧಿ ಪಡೆದ ದಿ.ಅಹ್ಮದ್ ನೂರಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಪುರಭವನದ ಅಹ್ಮದ್ ನೂರಿ ವೇದಿಕೆಯಲ್ಲಿ  ಶುಕ್ರವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಬಗ್ಗೆ ಲೇಖಕ ,ಲೇಖಕಿಯರು ಬ್ಯಾರಿ ಭಾಷೆಯಲ್ಲಿ  ಬರೆದ 10 ಕ್ರತಿಗಳನ್ನು ಅಕಾಡೆಮಿ ಪ್ರಕಟಿಸಿ ಬಿಡುಗಡೆಗೊಳಿಸಲಾಗಿದೆ. ಮುಂದೆಯೂ ಇನ್ನಷ್ಟು ಒಳ್ಳೆಯ ಕ್ರತಿಗಳನ್ನು ಪ್ರಕಟಿಸಲಾಗುವುದು. ಆ ಮೂಲಕ ಬ್ಯಾರಿ ಬಾಷೆಯ ಸಾಹಿತ್ಯ ವ್ರದ್ಧಿಗೆ ಪ್ರಯತ್ನಿಸಲಾಗುವುದು ಎಂದರು.

  ಕಾರ್ಯಕ್ರಮದಲ್ಲಿ ಅಕಾಡೆಮಿಯ ಮಾಜಿ ಸದಸ್ಯ , ಹಿರಿಯ ಸಾಹಿತಿ ಟಿ.ಎ ಆಲಿಯಬ್ಬ ಜೋಕಟ್ಟೆಗೆ ದಿ.ಅಹ್ಮದ್ ನೂರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  • ವಿಚಾರಗೋಷ್ಠಿ : ಅಹ್ಮದ್ ನೂರಿ ಅವರ ಬದುಕು ಮತ್ತು ಬರಹದ ಕುರಿತು ಪತ್ರಕರ್ತ ಹಂಝ ಮಲಾರ್ರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಪಡೀಲ್ , ಮುಸ್ಲಿಂ ಲೇಖಕರ ಸಂಘದ ಮಾಜಿ ಅಧ್ಯಕ್ಷ ಸಈದ್ ಇಸ್ಮಾಯಿಲ್ ವಿಷಯ ಮಂಡಿಸಿದರು.
  • ಬ್ಯಾರಿ ಅಕಾಡೆಮಿ ಪ್ರಕಟಿಸಿದ 10 ಕ್ರತಿಗಳ ಅನಾವರಣ

  ಪತ್ರಕರ್ತ ಎ.ಕೆ ಕುಕ್ಕಿಲ ಮಹಾತ್ಮ ಗಾಂಧೀಜಿ ಕುರಿತು ಬರೆದ ಜಂಡ್ ಕಂಡ ತುನಿರೊ ಪಕೀರ ಎಂಬ  ಕ್ರತಿಯನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ , ಹಫ್ಸಾ ಬಾನು ಬೆಂಗಳೂರು ಬರೆದ ಡಾ.ಬಿ.ಆರ್ ಅಂಬೇಡ್ಕರ್ ಕ್ರತಿಯನ್ನು ಪತ್ರಕರ್ತ ಪೆರೂರ್ ಜಾರು , ಎಂ ಅಶೀರುದ್ದೀನ್ ಆಲಿಯಾ ಬರೆದ ಸ್ವಾಮಿ ವಿವೇಕಾನಂದ ಕ್ರತಿಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಗೋಪಾಲಕ್ರಷ್ಣ ಭಟ್, ಅಬ್ದುಲ್ ರಝಾಕ್ ಅನಂತಾಡಿ ಬರೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರತಿಯನ್ನು ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ,ರಹೀನಾ ತೊಕ್ಕೊಟ್ಟು  ಬರೆದ ಹವಾಲ್ದಾರ್ ಅಬ್ದುಲ್ ಹಮೀದ್ ಕ್ರತಿಯನ್ನು ಸಿಆರ್ ಪಿಎಫ್  ಯೋಧ ಝುಬೈರ್ ಹಳೆನೇರೆಂಕಿಯ ಪತ್ನಿ ಮೆಹರಾಝ್ , ಅಬ್ದುಲ್ ರಹ್ಮಾನ್  ಕುತ್ತೆತ್ತೂರು ಬರೆದ ಸರ್,ಎಂ ವಿಶ್ವೇಶ್ವರಯ್ಯ ಹಾಗೂ ಝುಲೇಖಾ ಮುಮ್ತಾಝ್ ಬರೆದ ಡಾ.ಎಪಿಜೆ ಅಬ್ದುಲ್ ಕಲಾಂ ಕ್ರತಿಯನ್ನು ಶಾರದಾ ವಿಉದ್ಯಾಲಯದ ಪ್ರೊ.ಎಂ.ಬಿ ಪುರಾಣಿಕ್ , ಮರಿಯಮ್ ಇಸ್ಮಾಯಿಲ್ ಬರೆದ ವೀರ ರಾಣಿ ಅಬ್ಬಕ್ಕ ಕ್ರತಿಯನ್ನು ರಂಗಭೂಮಿ ಕಲಾವಿದೆ  ಸರೋಜಿನಿ ಶೆಟ್ಟಿ , ಮುಹಮ್ಮದ್ ಅಶ್ರಫ್ ಬಾವಾ ಬರೆದ ಮೌಲನಾ ಅಝಾದ್ ಕ್ರತಿಯನ್ನು ಡಾ.ಎಂಎಸ್ ಎಂ ಅಬ್ದುರ‍ಶೀದ್ ಝೈನಿ ಸಖಾಫಿ ಕಾಮಿಲ್ ,ಬಶೀರ್ ಅಹ್ಮದ್ ಕಿನ್ಯ ಬರೆದ ಅಟಲ್ ಬಿಹಾರಿ ವಾಜಪೇಯಿ ಕ್ರತಿಯನ್ನು ಮುಸ್ತಫಾ ತಂಙಳ್ ಕೋಲ್ಪೆ ಬಿಡುಗಡೆಗೊಳಿಸಿದರು. ಅಕಾಡೆಮಿಯ ಸದಸ್ಯರಾದ ಕಮರುದ್ದೀನ್ ಸಾಲ್ಮರ, ಶಂಶೀರ್ ಬುಡೋಳಿ , ಸುರೇಖಾ , ಚಂಚಲಾಕ್ಷಿ ಉಪಸ್ಥಿತರಿದ್ದರು.

  • ಕವಿಗೋಷ್ಠಿ : ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ ಎಂ .ಅಶೀರುದ್ದೀನ್ ಆಲಿಯಾ, ಸಾರಾ ಅಲಿ ಪರ್ಲಡ್ಕ ,ರಶೀದಾ ಉಚ್ಚಿಲ್ ಕವನ ವಾಚಿಸಿದರು.

  ಬಾತಿಷ್ ಪುತ್ತೂರು ಮತ್ತು ಬಳಗದಿಂದ ಬ್ಯಾರಿ ಸಂಗೀತ ಹಾಗೂ ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಕವ್ವಾಲಿ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.   ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

 13.    ದಿನಾಂಕ: 26-02-2022 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಕಟ್ಟಡ ಶಿಲಾನ್ಯಾಸ :

  ತೊಕ್ಕೊಟ್ಟಿನಲ್ಲಿ ಎರಡನೇ ಬಾರಿಗೆ ಬ್ಯಾರಿ ಸಾಹಿತ್ಯಅಕಾಡೆಮಿ ಕಚೇರಿಗೆ ಶಿಲಾನ್ಯಾಸ ನಡೆದಿದೆ. ಮತ್ತೊಂದೆಡೆ ಬಿಜೆಪಿ ಮುಖಂಡರು ,ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

  ಕಳೆದ ವರ್ಷ ಮೊದಲ ಬಾರಿಯ ಶಿಲಾನ್ಯಾಸಕ್ಕೆ ಅಬ್ಬಕ್ಕ ಉತ್ಸವ ಸಮಿತಿ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದ್ದರಿಂದ ಮುಂದೂಡಲಾಗಿತ್ತು. ವರ್ಷದ ಬಳಿಕ ಕೆಲದಿನಗಳ ಹಿಂದೆ ಸಚಿವರು, ಅಧಿಕಾರಿಗಳ  ಅನುಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಸಲಾಗಿತ್ತು. ಮೂರನೇ ಬಾರಿ ಸರ್ಕಾರದ ಒಪ್ಪಿಗೆ ಮೇರೆಗೆ ಶನಿವಾರ ಶಿಲಾನ್ಯಾಸ ಹಮ್ಮಿಕೊಂಡು ಉಸ್ತುವಾರಿ ಸಚಿವರು, ಸಂಸದರು ,ಶಾಸಕರನ್ನು ಆಹ್ವಾನಿಸಲಾಗಿತ್ತು. ಇದೇ ವೇಳೆ ಬಿಜೆಪಿ ಮುಖಂಡರು , ಅಬ್ಬಕ್ಕ ಉತ್ಸವ ಸಮಿತಿ ಪದಾಧಿಕಾರಿಗಳು ಧರಣಿ ಕುಳಿತಿದ್ದರು.  ಕಾರ್ಯಕ್ರಮಕ್ಕೆ ಸಚಿವರು, ಸಂಸದರು ಗೈರಾಗಿದ್ದರು. ಶಾಸಕರು ಆಗಮಿಸಿದಾಗ ಪ್ರತಿಭಟನಾಕಾರರು ಘೋಷಣೆ ಕೂಗಿ ಮುತ್ತಿಗೆ ಹಾಕಿದರು. ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಬ್ಯಾರಿ ಭಾಷಿಕರ ಭವನಕ್ಕೆ ನಮ್ಮ ವಿರೋಧವಿಲ್ಲ ಆದರೆ ಅಬ್ಬಕ್ಕ ಭವನ ಈ ವರೆಗೆ ಏಕೆ ಆಗಿಲ್ಲ , ಎಲ್ಲೋ ಆಗಬೇಕಾದ ಬ್ಯಾರಿ ಭವನ ಇಲ್ಲೇಕೆ ಎನ್ನುವ ಪ್ರಶ್ನೆಯಿದೆ. ಮುಂದಕ್ಕೆ ಸಾಮರಸ್ಯ ಹಾಳಾಗಬಾರದು ಎಂದರು.  ಶಾಸಕ ಯು.ಟಿ ಖಾದರ್ ಮಾತನಾಡಿ , ಬ್ಯಾರಿ ಎಲ್ಲಾ ಅಕಾಡೆಮಿಯಲ್ಲಿ ಎಲ್ಲಾ  ಧರ್ಮೀಯರಿದ್ದಾರೆ. ಬ್ಯಾರಿ ಅಕಾಡೆಮಿ ಭವನ ಮೂಡಾ ಬೈತುರ್ಲಿಯಿಂದ  ವರ್ಗಾಯಿಸುವಂತೆ ಅಲ್ಲಿನ ಶಾಸಕರು ರಹೀಂ ಉಚ್ಚಿಲ್ ಬಳಿ ಮಾತುಕತೆ ನಡೆಸಿದ್ದರು. ಬಳಿಕ ಉಸ್ತುವಾರಿ ಸಚಿವರು , ಶಾಸಕ ವೇದವ್ಯಾಸ ಕಾಮತ್ ಅವರು ಶಾಸಕ ಡಾ.ಭರತ್ ಶೆಟ್ಟಿಯಿಂದ ಮನವಿ ಸ್ವೀಕರಿಸಿ ತಹಸೀಲ್ದಾರ್ ಅವರೊಂದಿಗೆ ಸಭೆ ನಡೆಸಿದ್ದರು. ಆ  ಬಗ್ಗೆ ಯಾಗಲೀ, ನನಗೆ ಮಾಹಿತಿ ನೀಡದೇ ಅವರೇ ತೀರ್ಮಾನ ಮಾಡಿದ್ದಾರೆ ಎಂದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ ಮತ್ತು  ಸಾಂಸ್ಕ್ರತಿಕ ಸಂಘದ ಅಧ್ಯಕ್ಷ  ಬಶೀರ್ ಬೈಕಂಪಾಡಿ , ಮೇಲ್ತೆನೆ ಗೌರವಾಧ್ಯಕ್ಷ ಆಲಿಕುಂಞ ಪಾರೆ, ಬ್ಯಾರಿ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ರಿಜಿಸ್ಟ್ರಾರ್ ಪೂರ್ಣಿಮಾ , ಸಾಹಿತಿ ಸಂಶುದ್ದೀನ್ ಮಡಿಕೇರಿ , ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠ ಸಂಯೋಜಕ ಡಾ.ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಾಸ್ತಾವಿಕವಾಗಿ  ಮಾತನಾಡಿದರು. ಸದಸ್ಯ ನಝೀರ್ ಪೊಲ್ಯ ವಂದಿಸಿದರು. ಸದಸ್ಯ ಶಂಶೀರ್ ಬುಡೋಳಿ ನಿರೂಪಿಸಿದರು.

 14. ದಿನಾಂಕ : 06-3-2022  “ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್- 2022” : ಸುರತ್ಕಲ್ , ಕಾಟಿಪಳ್ಳ , ಕೃಷ್ಣಾಪುರ, ಕಾಟಿಪಳ್ಳ

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬೆಳಿಗ್ಗೆ  10 ರಿಂದ ಸಂಜೆ 6 ಗಂಟೆಯವರೆಗೆ ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ  9 ಸ‍್ಥಳಗಳಲ್ಲಿ ಬ್ಯಾರಿ ಜಾನಪದ , ಕಲೆ, ಸಂಸ್ಕೃತಿ ಗಳನ್ನು ಪರಿಚಯಿಸುವ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್ 2021-22 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . 2 ನೇ ಬ್ಲಾಕ್ ಸೈಟ್, ಕಾಟಿಪಳ್ಳ , 9 ನೇ ಬ್ಲಾಕ್ ಪದವು ,ಚೊಕ್ಕಬೆಟ್ಟು ಶಾಲೆ ಬಳಿ , ಚೊಕ್ಕಬೆಟ್ಟು ಜಂಕ್ಷನ್ ,7 ನೇ ಬ್ಲಾಕ್ ಕೃಷ್ಣಾಪುರ ಸೊಸೈಟಿ ಬಳಿ , 8ನೇ ಬ್ಲಾಕ್ ಕುಕ್ಕಾಡಿ, ನೈತಂಗಡಿ , ಕಾಟಿಪಳ್ಳ  2 ನೇ ಬ್ಲಾಕ್ ಶಾಲೆ ಬಳಿ , ಕಾಟಿಪಳ್ಳ ಶಂಶುದ್ದೀನ್ ಸರ್ಕಲ್ ನಲ್ಲಿ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಪ್ರದರ್ಶನ  ನಡೆಯಿತು. ಹಸನಬ್ಬ ಮೂಡುಬಿದಿರೆ ಕಾರ್ಯಕ್ರಮದ ಸಂಯೋಜಕರಾಗಿದ್ದರು.

 15.      ದಿನಾಂಕ : 08-3-2022  “ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ವಿಶ್ವ  ಮಹಿಳಾ ದಿನಾಚರಣೆ “

      ಕರ್ನಾಟಕ ಬ್ಯಾರಿ ಸಾಹಿತ್ಯಅಕಾಡೆಮಿ ವತಿಯಿಂದ ವಿಶ್ವ ಮಹಿಳಾ ದಿನವನ್ನು ಅಕಾಡೆಮಿ ಕಚೇರಿಯಲ್ಲಿ ಮಂಗಳವಾರ  ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಸದಸ್ಯೆ ಚಂಚಲಾಕ್ಷಿ ಮಾತನಾಡಿ, ಪುರುಷ ಪ್ರಧಾನ ಸಮಾಜ ಎಂಬ ಕಲ್ಪನೆ ಮಾಯವಾಗಿದ್ದು, ಇಂದು ಪ್ರಪಂಚದಾದ್ಯಂತ ತಾವೇನು ಕಡಿಮೆ ಇಲ್ಲ ಎಂಬಂತೆ ಮಹಿಳೆಯರು ಸಾಧನೆ ಮಾಡುತ್ತಿದ್ದು ಶ್ಲಾಘನೀಯ ಸಂಗತಿ ಎಂದರು . ಖ್ಯಾತ ಬ್ಯಾರಿ ಲೇಖಕಿ ಮತ್ತು ಕವಯತ್ರಿ ಹಫ್ಸಾ ಬಾನು ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಆಯೀಶಾ ಪೆರ್ನೆ ಹಾಗೂ ರಹೀನಾ ತೊಕ್ಕೊಟ್ಟು  ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬ್ಯಾರಿ ಮಹಿಳಾ ಸಾಧಕರಾದ ಹಫ್ಸಾ ಬಾನು (ಬ್ಯಾರಿ ಲೇಖಕಿ ಮತ್ತು ಕವಯತ್ರಿ), ಮರಿಯಮ್ ಇಸ್ಮಾಯಿಲ್ (ಲೇಖಕಿ ,ಸಾಹಿತಿ), ಡಾ| ಶಾಕೀರ ಇರ್ಫಾನ (ಶಿಕ್ಷಣ ಕ್ಷೇತ್ರ), ಡಾ|ಶಮ್ನ ಮಿನಾಝ್ ( ವೈದ್ಯಕೀಯ ಕ್ಷೇತ್ರ ), ಹಸೀನ ಇಸ್ಮಾಯಿಲ್ (ಸಮಾಜ ಸೇವೆ) ಅವರನ್ನು ಗೌರವಿಸಲಾಯಿತು .

   ಬಹುಮಾನ ವಿತರಣೆ :

     ಪ್ರೌಢಶಾಲೆ ,ಪಿಯುಸಿ, ಪದವಿ ವಿಭಾಗದ ಭಾಷಣ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಹರ್ಷಿದಾ ಹಾಗೂ ಸಾರ್ವಜನಿಕ ವಿಭಾಗದ ಭಾಷಣ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶೈಮಾ ಮಿನಾಝ್ ಮತ್ತು ದ್ವಿತೀಯ ಸ್ಥಾನಗಳಿಸಿದ ಖದೀಜತುಲ್ ಕುಬ್ರಾ ಅವರಿಗೆ ಬಹುಮಾನ ವಿತರಿಸಲಾಯಿತು. ಅಕಾಡೆಮಿ ಸದಸ್ಯೆ ರೂಪಶ್ರೀ ವರ್ಕಾಡಿ ಸ್ವಾಗತಿಸಿ , ಅಕಾಡೆಮಿ ಸದಸ್ಯೆ ಚಂಚಲಾಕ್ಷಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯೆ ಸುರೇಖಾ ಕಾರ್ಯಕ್ರಮವನ್ನು ನಿರೂಪಿಸಿದರು.

 16.   ಬ್ಯಾರಿ ತಾಲೀಮು ಜಲ್ಸ್ -2022 ಕಾರ್ಯಕ್ರಮ“ಬ್ಯಾರಿ ಭಾಷೆ , ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆಗೆ ಆದ್ಯತೆ”

    ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಎಮ್.ಜಿ.ಎಮ್ . ತಾಲೀಮು ಸ್ಫೋಟ್ಸ್ (ರಿ) ಗುರುಪುರ ಇದರ ಸಹಕಾರದಲ್ಲಿ “ಬ್ಯಾರಿ ತಾಲೀಮು ಜಲ್ಸ್ -2022 “ಕಾರ್ಯಕ್ರಮವು ಮಾರ್ಚ್ 11,2022ರಂದು  ಗುರುಪುರ ಕೈಕಂಬದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ  ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಕೋರೊನದಂತಹ ಸಂದಿಗ್ದ ಪರಿಸ್ಥಿಯಲ್ಲಿ 140 ಮಂದಿ  ಸಾಹಿತಿಗಳಿಗೆ ಆಹಾರದ ಕಿಟ್ ನ್ನು , 350 ಮಂದಿಗೆ ಧನಸಹಾಯ ಮಾಡಲಾಗಿದೆ. ಅಕಾಡೆಮಿ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು  ಎಂದರು. 6 ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ಪರಿಗಣಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು  ಇದರ ಕೆಲಸ ನಡೆಯುತ್ತಿದೆ. ಅಲ್ಲದೇ ಬ್ಯಾರಿ ಜಾನಪದ ಕಲೆಗಳ ಡಿಫ್ಲೋಮಾ ಕೋರ್ಸ್ ಆರಂಭ ಮಾಡಿದ್ದೇವೆ ಅಂದರು. ಎಸ್.ವೈ.ಎಸ್ ಯುನಿಟ್, ಗುರುಪುರ ಕೈಕಂಬ ಇದರ  ಅಧ್ಯಕ್ಷರಾದ ಎಮ್.ಹೆಚ್. ಮೊಹಿಯುದ್ದೀನ್ ಹಾಜಿ ಅಡ್ಡೂರ್  ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುಪುರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಯಶವಂತ ಶೆಟ್ಟಿ , ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು,  ಗಂಜಿಮಠ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನೋಣಯ್ಯ ಕೋಟ್ಯಾನ್ , ಗುರುಪುರ ಗ್ರಾಮ ಪಂಚಾಯತ್ ನ ಸದಸ್ಯರಾದ ರಾಜೇಶ್ ಕುಮಾರ್ , ಗ್ರಾಮ ಪಂಚಾಯತ್ ಸದಸ್ಯ ಎ.ಕೆ ರಿಯಾಜ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ  ಲಯನ್ ಡಾ.ಇ.ಕೆ.ಎ ಸಿದ್ದೀಕ್ ಅಡ್ಡೂರು,  ಇಬ್ರಾಹಿಂ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಬಜ್ಪೆ, ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷರಾದ  ಜಿ.ಎಮ್ .ಶಾಹುಲ್ ಹಮೀದ್ ಹಾಜಿ ಮೆಟ್ರೋ ,ಸಮಾಜ ಸೇವಕರು ಹಾಗೂ ಉದ್ಯಮಿ ಗುರುಪುರ ಅಬ್ದುಲ್ ಲತೀಫ್,  ಮದರಸ ಮ್ಯಾನೇಜ್‌ ಮೆಂಟ್‌ ಗುರುಪುರ ರೇಂಜ್‌ ನ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ  ನೌಶಾದ್‌ ಹಾಜಿ, ಆದರ್ಶ್‌ ಗ್ರೂಪ್‌ ಆಫ್‌ ಇನ್ಸ್ಟೂಷನ್‌ ನಿರ್ದೇಶಕ ಹಾಗೂ ಸಮಾಜ ಸೇವಕ ಆಸಿಫ್‌ ಸೂರಲ್ಪಾಡಿ , ಉಮ್ಮಗ್ ಒರು ಅಗ ಸಂಸ್ಥೆಯ ಅಧ್ಯಕ್ಷ ಮುಸ್ತಫ ಇಂಜಿನಿಯರ್ ದೆಮ್ಮಲೆ ಅಡ್ಡೂರು, ತಕ್ವಿಯತುಲ್ ಇಸ್ಲಾಂ ಮದರಸ ಇದರ ಅಧ್ಯಕ್ಷ  ಅನ್ಸಾರ್ ಇಂಜಿನಿಯರ್ ಅದ್ಯಪಾಡಿ, ಮುಖ್ಯ ಅತಿಥಿಗಳಾಗಿ  ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್‌ ಮೂಡು ಶೆಡ್ಡೆ, ಸಂತ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕಿ ಫ್ಲೋರಾ ಕ್ಯಾಸ್ಟಲಿನೋ , ಸಮಾಜ ಸೇವಕ, ಉದ್ಯಮಿ ಎಮ್. ಎಸ್‌ ಶೇಖ್ ಮೋನು ಅಡ್ಡೂರು, ಎದುರು ಪದವು ಜುಮ್ಮಾ ಮಸೀದಿಯ ಅಧ್ಯಕ್ಷ ಹನೀಫ್‌, ಉದ್ಯಮಿ ಎಮ್‌ ಜಿ ಅಬ್ದುಲ್‌ ಬಶೀರ್‌ ಗುರುಪುರ, ಫ್ರೆಂಡ್ಸ್‌ ಸರ್ಕಲ್‌ ಕೆ ಗುರುಪುರ ಕೈಕಂಬ ಇದರ ಅಧ್ಯಕ್ಷ ಅಬ್ದುಲ್ಲಾ ಮೇಫಾ, ಐಡಿಯಲ್‌ ಮರ್ಕಜ್‌ ಕೈಕಂಬ ಇಸ್ಮಾಯಿಲ್‌ ಬಶೀರ್‌, ಸಮಾಜ ಸೇವಕರು ಉದ್ಯಮಿ ಎ.ಕೆ. ಹಾರೀಸ್‌ ಅಡ್ಡೂರು, ಸಮಾಜ ಸೇವಕ ಅಡ್ಡೂರು ಡಿ.ಎಸ್.ರಫೀಕ್‌, ಮೋದಿ ಪರಿವಾರ್‌ ರಿಕ್ಷಾ ಚಾಲಕರು ಕೈಕಂಬ ಇದರ ಅಧ್ಯಕ್ಷ ಸತೀಶ್‌ ಜೋಗಿ ಮಟ್ಟಿ, ಅಬ್ದುಲ್‌ ಕಾದರ್‌ ಎನ್‌ ಕೆ ನಡುಗುಡ್ಡೆ, ಬಾಮಿ ಆಂಗ್ಲಮಾಧ್ಯಮ ಶಾಲೆ ತೆಂಕುಳಿಪಾಡಿಯ ಗುರುಪುರದ ನಿಕಟಪೂರ್ವ ಪ್ರಾಂಶುಪಾಲ ಹೆಚ್ ನಾಸಿರ್ ಮಾಸ್ಟರ್ ಹಿರೇಬಂಡಾಡಿ, ಎಸ್.ವೈ.ಎಸ್ ಯುನಿಟ್ ಗುರುಪುರ ಕೈಕಂಬ ಇದರ ನಿರ್ದೇಶಕ ಹಂಝ ಕೈಕಂಬ, ಎಮ್ .ಜೆ. ಎಮ್ . ತಾಲೀಮು ಸ್ಫೋಟ್ಸ್ (ರಿ) ಗುರುಪುರದ ಕಾರ್ಯದರ್ಶಿ ಎಂ.ಜಿ ಅಬ್ದುಲ್ ಸಲಾಂ ಗುರುಪುರ, ಅನ್ಸಾರ್, ಇನ್ ಬಾಕ್ಸ್ ಮೂಡಬಿದಿರೆ, ಬದ್ರುದ್ದೀನ್ ,ಇನ್ ಬಾಕ್ಸ್ ಮೂಡಬಿದಿರೆ ಇವರುಗಳು ಭಾಗವಹಿಸಿದರು.

  ಸನ್ಮಾನ

   ಅಕಾಡೆಮಿ ವತಿಯಿಂದ  ವಿಕಾಯ ಕೈಕಂಬ ಎಸ್‌ ಕೆ ಎಸ್‌ ಎಸ್‌ ಎಫ್‌ ಗುರುಪುರ ಕೈಕಂಬ (ಸಮಾಜ ಸೇವೆ), ಸಹಾಯ್‌ ಎಸ್‌ ಎಸ್‌ ಏಫ್‌ ಗುರುಪುರ ಕೈಕಂಬ (ಸಮಾಜ ಸೇವೆ), ಮಹಮ್ಮದ್‌ ಕುಂಞ (ಗುರುಕುಲ ಪ್ರಶಸ್ತಿ ವಿಜೇತರು), ಮುಝಮ್ಮಿಲ್‌ ನೂಯಿ (ಸಮಾಜಸೇವೆ), ಎ.ಕೆ.ಇಮ್ರಾನ್‌ ಅಡ್ಡೂರು (ಸಮಾಜ ಸೇವೆ), ಅಬ್ದುಲ್‌ ಜಲೀಲ್‌ ಅಡ್ಡೂರು (ಸಮಾಜ ಸೇವೆ), ಕಲಂದರ್‌ ಬಜ್ಪೆ  (ಸಾಹಿತಿ ಕವಿ ಚಿಂತಕರು), ತಾಜುದ್ದೀನ್‌ ಅಮ್ಮುಂಜೆ (ಸಾಹಿತಿ ಗಾಯಕರು), ಝಕರೀಯ ಅಡ್ಡೂರು (ಸೌಹಾರ್ದತೆ), ಅರ್ಫರಾಝ್‌ ಉಳ್ಳಾಲ (ಗಾಯಕರು), ಇಸ್ಮಾಯಿಲ್‌ ಮೂಡುಶೆಡ್ಡೆ (ಚಲನಚಿತ್ರ ನಿರ್ದೇಶಕರು), ಫ್ರೆಂಡ್ಸ್‌ ಸರ್ಕಲ್‌ ಕೈಕಂಬ (ಸಮಾಜ ಸೇವೆ), ಎಮ್‌ ಎಚ್‌ ಮುಹಿಯ್ಯದ್ದೀನ್‌ ಅಡ್ಡೂರು (ಸಮಾಜ ಸೇವೆ), ಅಝೀಝ್‌ ಕಂದಾವರ (ಸಮಾಜ ಸೇವೆ ), ಮಯ್ಯದ್ದೀ ಉಳಾಯಿಬೆಟ್ಟು (ಧಾರ್ಮಿಕ )ಇವರನ್ನು ಸನ್ಮಾನಿಸಲಾಯಿತು.

  ಬಳಿಕ ಎಮ್.ಜಿ.ಎಮ್ ತಾಲೀಮು ಸ್ಫೋರ್ಟ್ಸ್ ಕ್ಲಬ್ ಗುರುಪುರ ಅವರಿಂದ ತಾಲೀಮು ಪ್ರದರ್ಶನ ನಡೆಯಿತು.  ಹಸನಬ್ಬ ಮೂಡಬಿದಿರೆ ಇವರಿಂದ ಬ್ಯಾರಿ ಸಂಗೀತ ರಸಮಂಜರಿ ನಡೆಯಿತು. ಮಹಮ್ಮದ್ ಕುಂಞ ಸ್ವಾಗತಿಸಿದರು ಶಂಶೀರ್ ಬುಡೋಳಿ ನಿರೂಪಿಸಿದರು.

 17.  3-10-2022 ರ  ಬ್ಯಾರಿ ಭಾಷಾ ದಿನಾಚರಣೆ , ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ:

  ಎಲ್ಲ ಭಾಷೆ ಜತೆಗಿರುವ ಸಾಮರಸ್ಯ ನಮ್ಮದು .ತುಳು ,ಬ್ಯಾರಿ, ಕೊಂಕಣಿ ಭಾಷೆಯ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ  ಸಹಬಾಳ್ವೆ, ಸಹೋದರತೆ ಮುಖ್ಯವಾಗುತ್ತದೆ ಎಂದು ಮಂಗಳೂರು  ವಿ.ವಿ ಕಾಲೇಜಿನ ಪ್ರಾಂಶುಪಾಲೆ ಡಾ|ಅನಸೂಯ ರೈ ಹೇಳಿದರು.

  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ  ಕಾಲೇಜಿನ ಡಾ| ಶಿವರಾಮ ಕಾರಂತ ಭವನದಲ್ಲಿ ಸೋಮವಾರ ಆಯೋಜಿಸಿದ ಬ್ಯಾರಿ ಭಾಷಾ ದಿನಾಚರಣೆ,ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

  ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಪೂರ್ಣಿಮಾ ಮಾತನಾಡಿದರು. ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಬಂಟ್ವಾಳ ಉಪನ್ಯಾಸಕ ಅಬ್ದುಲ್‌ ರಝಾಕ್‌ ಅನಂತಾಡಿ ಮಾತನಾಡಿ, ಬ್ಯಾರಿ ಬಾಷಾ ದಿನಾಚರಣೆಯ ಉಪನ್ಯಾಸ ನೀಡಿದರು. ಲೇಖಕ ಹಾಗೂ ಸ್ನೇಹ ಪಬ್ಲಿಕ್‌ ಸ್ಕೂಲ್‌ ಬಜಾಲ್‌ ಶಿಕ್ಷಕ ಅಶೀರುದ್ದೀನ್‌ ಆಲಿಯಾ ಅವರು ಬರೆದ ಬ್ಯಾರಿ ವಚನಮಾಲೆ ಕೃತಿಯನ್ನು ಸಾಹಿತಿ, ಪತ್ರಕರ್ತ ಹಂಝ ಮಲಾರ್‌ ಬಿಡುಗಡೆಗೊಳಿಸಿ, ಕೃತಿ ಪರಿಚಯ ಮಾಡಿದರು. ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕ ಡಾ|ಅಬೂಬಕ್ಕರ್‌ ಸಿದ್ದಿಕ್‌ ಉಪಸ್ಥಿತರಿದ್ದು, ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್‌ ಬುಡೋಳಿ ನಿರೂಪಿಸಿದರು. ಬ್ಯಾರಿ ಅಕಾಡೆಮಿ ಸದಸ್ಯೆ ಸುರೇಖಾ ವಂದಿಸಿದರು.

 18.  23-11-2022 ರ ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ ಸಾಂಸ್ಕೃತಿಕ ಏಕತಾ ದಿನ

  ಭಾಷೆಗಳನ್ನು ಉಳಿಸಿದರೆ ಮಾತ್ರ ಭಾರತೀಯ ರಾಷ್ಟ್ರೀಯ ಏಕತೆಯನ್ನು ಎಲ್ಲಾ ಮುಂದಿನ ಪೀಳಿಗೆಗೆ ಕೊಡಲು ಸಾಧ್ಯವಾದೀತು ಎಂದು ದ.ಕ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ಹೇಳಿದರು.

  ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಕೊಂಕಣಿ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಜಂಟಿ ಆಶ್ರಯದಲ್ಲಿ ಕೊಂಕಣಿ ಅಕಾಡೆಮಿಯ ಕಚೇರಿ ಸಭಾಂಗಣದಲ್ಲಿ ನಡೆದ  ಕೊಂಕಣಿ ,ತುಳು, ಬ್ಯಾರಿ, ಹವ್ಯಕ, ಹಿಂದಿ ,ಕನ್ನಡ ಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಜೊಸ್ಸಿ ಪಿಂಟೊ ಕಿನ್ನಿಗೋಳಿ ,ಅರವಿಂದ್‌ ಶಾನಭಾಗ್‌  ಬಾಳೇರಿ, ಜೂಲಿಯೆಟ್‌ ಫೆರ್ನಾಂಡಿಸ್‌ ಮಂಗಳೂರು (ಕೊಂಕಣಿಯಲ್ಲಿ), ಮುಹಮ್ಮದ್‌ ಬಡ್ಡೂರ್‌, ಅನುರಾಧಾ ರಾಜೀವ್‌ ,ರೇಮಂಡ್‌ ಡಿಕುನ್ನಾ ತಾಕೋಡೆ (ತುಳುವಿನಲ್ಲಿ ), ಹಂಝ ಮಲಾರ್‌ ,ಎಡ್ವರ್ಡ್‌ ಲೋಬೊ ತೊಕ್ಕೊಟ್ಟು, ಸಿಹಾನ ಬಿ.ಎಂ, (ಬ್ಯಾರಿ ಭಾಷೆಯಲ್ಲಿ) , ಮಹೇಶ್‌ ಆರ್.ನಾಯಕ್‌,ಪೂರ್ಣಿಮಾ ಸುರೇಶ್‌ ನಾಯಕ್‌, ನವೀನ್‌ ಡಿಸೋಜ (ಕನ್ನಡದಲ್ಲಿ) ,ಡಾ.ಸುರೇಶ ನೆಗಳಗುಳಿ, ಗುಣಾಜೆ ರಾಮಚಂದ್ರ ಭಟ್‌ (ಹವ್ಯಕದಲ್ಲಿ) ಡಾ.ಪರಶುರಾಮ ಮಾಳಗೆ, ಅರುಣ್‌ ಜಿ.ಶೇಟ್‌  (ಹಿಂದಿಯಲ್ಲಿ) ಕವನ ವಾಚಿಸಿದರು.

  ರಾಷ್ಟ್ರೀಯ ಪ್ರಶಸ್ತಿ ವಿಜೇತ ರೆಮೊನಾ ಇವಟ್‌ ಪಿರೇರಾ ನೃತ್ಯ ಪ್ರದರ್ಶಿಸಿದರು. ಮಾಜಿ ಉಪಮೇಯರ್‌ ಬಶೀರ್‌ ಬೈಕಂಪಾಡಿ , ಮಾರ್ಸೆಲ್‌ ಡಿಸೋಜ, ಶಂಶೀರ್‌ ಬುಡೋಳಿ , ಸತ್ಯಾವತಿ , ಹಾರೂನ್‌ ರಶೀದ್‌ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು. ಕೊಂಕಣಿ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಮನೋಹರ್‌ ಕಾಮತ್‌ ಸ್ವಾಗತಿಸಿದರು.

    

ಇತ್ತೀಚಿನ ನವೀಕರಣ​ : 25-11-2022 01:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080